ಭಾರತ ನ್ಯೂಜಿಲೆಂಡ್ ಏಕದಿನ ಸರಣಿ ➤ ಭಾರತಕ್ಕೆ 12 ರನ್ ಗಳ ಗೆಲುವು..

(ನ್ಯೂಸ್ ಕಡಬ) newskadaba.com. ಹೈದರಾಬಾದ್,ಜ.19.  ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಕ್ವೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ ಇದೀಗ ನ್ಯೂಜಿಲೆಂಡ್ ವಿರುದ್ಧ ಶುಭಾರಂಭ ಮಾಡಿದೆ. ಶುಬಮನ್ ಗಿಲ್ ಆಕರ್ಷಕ ದ್ವಿಶತಕದ ಮೂಲಕ ಬೃಹತ್ ಟಾರ್ಗೆಟ್ ನೀಡಿದ್ದ ಟೀಂ ಇಂಡಿಯಾ ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿತು. ಆದರೆ ಅಂತಿಮ ಹಂತದಲ್ಲಿ ಮಿಚೆಲ್ ಬ್ರೇಸ್‌ವೆಲ್ ಹೋರಾಟ ಟೀಂ ಇಂಡಿಯಾದಲ್ಲಿ ಆತಂಕ ಸೃಷ್ಟಿಸಿತು. ಆದರೆ ಕೊನೆಯ ಓವರ್‌ನಲ್ಲಿ ಭಾರತ ಗೆಲುವಿನ ದಡ ಸೇರಿತು. ನ್ಯೂಜಿಲೆಂಡ್ 49.2 ಓವರ್‌ಗೆ 337 ರನ್ ಸಿಡಿಸಿ ಆಲೌಟ್ ಆಯಿತು. ಇದರೊಂದಿಗ ಭಾರತ 12 ರನ್ ಗೆಲುವು ದಾಖಲಿಸಿತು.

ಭಾರತದ ಪರ ಶುಭಮನ್ ಗಿಲ್ ಹೊರತುಪಡಿಸಿದರೆ ಇತರರಿಂದ ನಿರೀಕ್ಷಿತ ಬ್ಯಾಟಿಂಗ್ ಮೂಡಿಬರಲಿಲ್ಲ. ಆದರೆ ಗಿಲ್ ಸ್ಫೋಟಕ ಡಬಲ್ ಸೆಂಚುರಿಯಿಂದ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 349 ರನ್ ಸಿಡಿಸಿತ್ತು. ಈ ಟಾರ್ಗೆಟ್ ಚೇಸಿಂಗ್ ಮಾಡುವುದು ನ್ಯೂಜಿಲೆಂಡ್ ತಂಡಕ್ಕೆ ಸವಾಲಾಗಿತ್ತು. ಆರಂಭದಿಂದಲೇ ಟೀಂ ಇಂಡಿಯಾ ಬಿಗಿಯಾದ ಬೌಲಿಂಗ್ ದಾಳಿ ನಡೆಸಿತು. ಹೀಗಾಗಿ ನ್ಯೂಜಿಲೆಂಡ್ ನಿರೀಕ್ಷಿತ ಆರಂಭವೂ ಪಡೆಯಲಿಲ್ಲ. ಡೆವೋನ್ ಕಾನ್ವೇ 10 ರನ್ ಸಿಡಿಸಿ ಔಟಾದರು. 28 ರನ್‌ಗೆ ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾಗೆ ಶುಭಮನ್ ಗಿಲ್ ಹೊರತುಪಡಿಸಿದರೆ ಇತರರಿಂದ ರನ್ ಹರಿದುಬರಲಿಲ್ಲ. ಶುಭಮನ್ ಗಿಲ್ ಹೋರಾಟಕ್ಕೆ ನ್ಯೂಜಿಲೆಂಡ್ ಬೆಚ್ಚಿ ಬಿದ್ದಿತು. ಹಾಫ್ ಸೆಂಚುರಿ ಬಳಿಕ ಕ್ಷಿಪ್ರ ವೇಗದಲ್ಲಿ ಡಬಲ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದರು. ಗಿಲ್ 149 ಎಸೆತದಲ್ಲಿ 208 ರನ್ ಸಿಡಿಸಿದರು. ಈ ಮೂಲಕ ಏಕದಿನದಲ್ಲಿ ದ್ವಿಶತಕ ಸಿಡಿಸಿದ ಅತೀ ಕಿರಿಯ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ. ಇಷ್ಟೇ ಅಲ್ಲ ನ್ಯೂಜಿಲೆಂಡ್ ವಿರುದ್ಧ ವೈಯುಕ್ತಿಕ ಗರಿಷ್ಠ ರನ್ ಸಿಡಿಸಿದ ದಾಖಲೆಯನ್ನೂ ಬರೆದರು.

Also Read  ಅಂದುಕೊಂಡ ಕೆಲಸ ಕಾರ್ಯಗಳು ಬೇಗನೆ ಆಗಬೇಕೆಂದರೆ ತಪ್ಪದೇ ಈ ನಿಯಮ ಪಾಲಿಸಿ

error: Content is protected !!
Scroll to Top