ಚೀನಾದಲ್ಲಿ ಕೋವಿಡ್ ಸ್ಫೋಟ ➤ನಿತ್ಯ 36000 ಜನರ ಬಲಿ..!

(ನ್ಯೂಸ್ ಕಡಬ) newskadaba.com. ಚೀನಾ,ಜ.19. ಚೀನಾ ದೇಶದಲ್ಲಿ ನಿತ್ಯ ಕೋವಿಡ್‌ಗೆ 36,000 ಜನರು ಮೃತಪಡುತ್ತಾರೆ ಎನ್ನಲಾಗಿದೆ. ಚೀನಾದಲ್ಲಿ ಕೋವಿಡ್‌ ಸೋಂಕು  ಹರಡುತ್ತಿರುವುದು ಭಾರಿ ಆತಂಕ ಉಂಟುಮಾಡಿದೆ.

ಚೀನಾದಲ್ಲಿ ಒಂದು ತಿಂಗಳು ಕಾಲ ನಡೆಯುವ ಹೊಸ ವರ್ಷಾಚರಣೆ ಜನವರಿ 21ರಿಂದ ಆರಂಭವಾಗಲಿದ್ದು, ದೇಶದಲ್ಲಿ ಮತ್ತೆ ಕೋವಿಡ್‌ ಸೋಂಕು ಸ್ಫೋಟಗೊಳ್ಳುವ ಆತಂಕ ಎದುರಾಗಿದೆ. ನಿತ್ಯ ಗರಿಷ್ಠ 36,000 ಜನರು ಸಾಯಬಹುದು ಎಂದು ಅಧ್ಯಯನ ವರದಿಯೊಂದು ಎಚ್ಚರಿಕೆ ನೀಡಿದೆ. ಕೋವಿಡ್‌ ವಿಷಯದಲ್ಲಿ ಕಳೆದ 3 ವರ್ಷಗಳಿಂದ ಕಟ್ಟುನಿಟ್ಟಾಗಿ ಜಾರಿ ಮಾಡಿದ್ದ ನೀತಿಯನ್ನು ಚೀನಾ ಸರ್ಕಾರ ಪೂರ್ಣವಾಗಿ ಕೈಬಿಟ್ಟಿದೆ. ಅದರ ಬೆನ್ನಲ್ಲೇ ಒಂದು ತಿಂಗಳು ಕಾಲ ಚಾಂದ್ರಮಾನ ಹೊಸ ವರ್ಷಾಚರಣೆ ಸಂಭ್ರಮ ದೇಶಾದ್ಯಂತ ಮನೆ ಮಾಡಿದೆ. ನಗರ ಪ್ರದೇಶಗಳಿಗೆ ಉದ್ಯೋಗ ಅರಸಿ ಬರುವ ಕೋಟ್ಯಂತರ ಜನರು ಪ್ರತಿ ವರ್ಷ ಈ ಸಮಯದಲ್ಲಿ ತಮ್ಮ ಹುಟ್ಟೂರಿಗೆ ತೆರಳುತ್ತಿದ್ದಾರೆ. ಕೋವಿಡ್‌ ನೀತಿ ಸಡಿಲ ಮಾಡಿರುವ ಹಿನ್ನೆಲೆಯಲ್ಲಿ 3 ವರ್ಷಗಳಿಂದ ತಮ್ಮ ತವರಿಗೆ ತೆರಳದ ಕೋಟ್ಯಂತರ ಜನರು ಇದೀಗ ಹುಟ್ಟೂರಿನತ್ತ ಮುಖ ಮಾಡಿದ್ದಾರೆ. ಹೀಗಾಗಿ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಕನಿಷ್ಠ 201 ಕೋಟಿ ಸಂಚಾರ ನಡೆಯಲಿದೆ ಎಂದು ಅಂದಾಜಿಸಲಾಗಿದೆ.

ಹೀಗಾಗಿ ಕೋವಿಡ್‌ ವಿಷಯದಲ್ಲಿ ಶೂನ್ಯ ಸಹಿಷ್ಣು ನೀತಿ ಅನುಸರಿಸಿದರೂ ಸೋಂಕು ನಿಯಂತ್ರಿಸಲಾಗದ ಚೀನಾಕ್ಕೆ, ಇದೀಗ ಕೋಟ್ಯಂತರ ಜನರ ಸಂಚಾರ ಹೊಸ ಆತಂಕ ಸೃಷ್ಟಿಮಾಡಿದೆ.

error: Content is protected !!
Scroll to Top