ಮದ್ಯ ಖರೀದಿ ವಯಸ್ಸನ್ನು 21ರಿಂದ 18 ಕ್ಕೆ ಇಳಿಸುವ ನಿರ್ಧಾರದಿಂದ ಹಿಂದೆ ಸರಿದ ಸರಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 19. ಮದ್ಯ ಖರೀದಿ ಮತ್ತು ಮಾರಾಟಕ್ಕೆ ನಿಗದಿಪಡಿಸಿದ್ದ ಕನಿಷ್ಠ ವಯಸ್ಸಿನ ಮಿತಿಯನ್ನು 21ರಿಂದ 18ಕ್ಕೆ ಇಳಿಸಲು ಮುಂದಾಗಿದ್ದ ನಿರ್ಧಾರದಿಂದ ಸರಕಾರ ಹಿಂದೆ ಸರಿದಿದೆ.

ಕರ್ನಾಟಕ ಅಬಕಾರಿ ಪರವಾನಗಿಗಳ ನಿಯಮಗಳು- 1967ಕ್ಕೆ ತಿದ್ದುಪಡಿ ತರಲು ಅಬಕಾರಿ ಇಲಾಖೆಯು ಪ್ರಸ್ತಾವನೆಯನ್ನು ಪ್ರಕಟಿಸಿತ್ತು. ಮದ್ಯ ಮಾರಾಟ ಹಾಗೂ ಖರೀದಿ ವಯಸ್ಸಿನ ಮಿತಿ ಕಡಿತ ಮಾಡಿ ಕರಡು ಅಧಿಸೂಚನೆಯನ್ನು ಸೋಮವಾರದಂದು ಪ್ರಕಟಿಸಿತ್ತು. ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಖಂಡನೆ ವ್ಯಕ್ತಿವಾಗುತ್ತಿದ್ದಂತೆ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

Also Read  ದಲಿತ ಮುಖಂಡ ಪಿ.ಡೀಕಯ್ಯರವರ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ..!

error: Content is protected !!
Scroll to Top