17 ಕಿ.ಮೀ ನಡೆದು ವಾರ್ಡನ್‌ ವಿರುದ್ಧ ದೂರು ನೀಡಿದ ವಿದ್ಯಾರ್ಥಿನಿಯರು

(ನ್ಯೂಸ್ ಕಡಬ)newskadab.com ಜಾರ್ಖಂಡ್, ಜ.18. ಹಾಸ್ಟೆಲ್‌ ವಾರ್ಡನ್‌ ನೀಡುವ ದೌರ್ಜನ್ಯ ಸಹಿಸದೇ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಾಸ್ಟೆಲ್‌ನಿಂದ ರಾತ್ರಿ ವೇಳೆ 17 ಕಿ.ಮೀ ದೂರ ನಡೆದು ಹೋಗಿ ಜಿಲ್ಲಾಧಿಕಾರಿಗೆ ದೂರು ನೀಡಿದ ಪ್ರಸಂಗ ಜಾರ್ಖಂಡ್‌ನ ಪಶ್ಚಿಮ ಸಿಂಗಭೂಮ್ ಜಿಲ್ಲೆಯಲ್ಲಿ ನಡೆದಿದೆ. ಖುಂತ್‌ಪಾನಿ ಕಸ್ತೂರಬಾ ಗಾಂಧಿ ವಸತಿ ನಿಲಯದ 11ನೇ ತರಗತಿ ವಿದ್ಯಾರ್ಥಿನಿಯರು, ಚೈಬಾಸಾದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಡಿಸಿ ಅನನ್ಯಾ ಮಿತ್ತಲ್‌ ಅವರಿಗೆ ದೂರು ಸಲ್ಲಿಸಿದರು.

ಡಿಸಿ ನೀಡಿದ ನಿರ್ದೇಶನದ ಮೇರೆಗೆ ಜಿಲ್ಲಾ ಶಿಕ್ಷಣಾಧಿಕಾರಿ (ಡಿಎಸ್‌ಇ) ಅಭಯಕುಮಾರ್‌ ಶೀಲ್‌ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿನಿಯರ ಕುಂದುಕೊರತೆ ಆಲಿಸಿದರು. ”ಘಟನೆಯ ಬಗ್ಗೆ ತನಿಖೆ ನಡೆಸಲು ಸೂಕ್ತ ತಂಡವನ್ನು ರಚಿಸಲಾಗುವುದು ಹಾಗೂ ವಾರ್ಡನ್‌ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,” ಎಂದು ಬಾಲಕಿಯರಿಗೆ ಭರವಸೆ ನೀಡಿದರು. ಬಳಿಕ ವಾಹನಗಳಲ್ಲಿ ಬಾಲಕಿಯರನ್ನು ಶಾಲೆಗೆ ಕಳುಹಿಸಿದರು.

Also Read  ಮಂಗಳೂರು ವಿಶ್ವವಿದ್ಯಾನಿಲಯ ► ನಾಳೆ ನಡೆಯಬೇಕಾಗಿದ್ದ ಪದವಿ ಪರೀಕ್ಷೆಗಳ ಮುಂದೂಡಿಕೆ

 

error: Content is protected !!
Scroll to Top