ಕುಂದಾಪುರ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 20 ಲಕ್ಷ ರೂ. ಚಿನ್ನಾಭರಣ ಕಳವು

(ನ್ಯೂಸ್ ಕಡಬ)newskadab.com  ಕುಂದಾಪುರ, ಜ.18. ಗೋವಾದ ಪಣಜಿಯಿಂದ ಸಾಸ್ತಾನದ ಐರೋಡಿಗೆ ಬಸ್ಸಿನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದು, ವಸ್ತುಗಳನ್ನು ಹಿಂದಿ ಮಾತನಾಡುವ ತಂಡ ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದೆ. ಐರೋಡಿ ನಿವಾಸಿ ಸಂಗೀತಾ ಭಟ್ ಚಿನ್ನಾಭರಣ ಕಳೆದುಕೊಂಡ ಮಹಿಳೆಯಾಗಿದ್ದು, ಆಕೆಯು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪಣಜಿಯಿಂದ ಪುತ್ತೂರಿಗೆ ತೆರಳುತ್ತಿದ್ದರು. ಸಂಗೀತಾ ತನ್ನ ಬಟ್ಟೆ ಮತ್ತು ಚಿನ್ನಾಭರಣಗಳಿರುವ ಚಿಕ್ಕ ಕಾಟನ್ ಬ್ಯಾಗ್ ಅನ್ನು ಟ್ರಾಲಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಅದನ್ನು ಲಾಕ್ ಮಾಡಿ ತಾನು ಕುಳಿತಿದ್ದ ಸೀಟಿನ ಕೆಳಗೆ ಇಟ್ಟಿದ್ದರು.

ಇನ್ನು ತನ್ನ ಹುಟ್ಟೂರು ಮಾಬುಕಳ ತಲುಪಿದ ನಂತರ ಸಂಗೀತಾ ಇಳಿದು ಮನೆಗೆ ಬಂದಿದ್ದು, ಟ್ರಾಲಿ ಬ್ಯಾಗ್‌ನಲ್ಲಿ ಚಿನ್ನಾಭರಣಗಳಿದ್ದ ಕಾಟನ್ ಬ್ಯಾಗ್ ನಾಪತ್ತೆಯಾಗಿರುವು ತಿಳಿದು ಬಂದಿದೆ. ತನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಹಿಂದಿ ಮಾತನಾಡುವ ಪುರುಷರ ಮೇಲೆ ಆಕೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

Also Read  ಮಂಗಳೂರು: ಪಣೋಲಿಬೈಲ್ ದೈವಸ್ಥಾನದ ನೂತನ ಆಡಳಿತ ಅಧಿಕಾರಿಯಾಗಿ ರಶ್ಮಿ.ಎಸ್.ಆರ್ ನೇಮಕ

 

error: Content is protected !!
Scroll to Top