ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ! ➤ ಕರ್ನಾಟಕದ ನಗರಗಳಲ್ಲೂ ಇಂದಿನಿಂದ 5G ಸೇವೆ ಲಭ್ಯ

(ನ್ಯೂಸ್ ಕಡಬ)newskadab.com ಬೆಂಗಳೂರು, ಜ.18. ರಿಲಯನ್ಸ್ ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಕರ್ನಾಟಕದ ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗ-ಬೆಟಗೇರಿಯಲ್ಲಿ ರಿಲಯನ್ಸ್ ಜಿಯೋ ಟ್ರೂ 5ಜಿ ಸೇವೆ ಇಂದಿನಿಂದ ಶುರುವಾಗಿದೆ.


ಕಾಕಿನಾಡ, ಕರ್ನೂಲ್ (ಆಂಧ್ರ ಪ್ರದೇಶ), ಸಿಲ್ಚಾರ್ (ಅಸ್ಸಾಂ), ಮಲಪ್ಪುರಂ, ಪಾಲಕ್ಕಾಡ್, ಕೊಟ್ಟಾಯಂ, ಕಣ್ಣೂರು (ಕೇರಳ), ತಿರುಪ್ಪೂರ್ (ತಮಿಳುನಾಡು), ನಿಜಾಮಾಬಾದ್, ಖಮ್ಮಂ ( ತೆಲಂಗಾಣ), ಬರೇಲಿ (ಉತ್ತರ ಪ್ರದೇಶ)ಯಲ್ಲೂ ಇಂದಿನಿಂದ ಜಿಯೋ ಟ್ರೂ 5ಜಿ ಲಭ್ಯವಾಗಲಿದೆ.
ಈ ನಗರಗಳಲ್ಲಿ 5ಜಿ ಸೇವೆಗಳನ್ನು ಒದಗಿಸುವ ಮೊದಲ ಮತ್ತು ಏಕೈಕ ಆಪರೇಟರ್ ಜಿಯೋ ಆಗಿದೆ. ದೇಶದ 134 ನಗರಗಳಲ್ಲಿ ರಿಲಯನ್ಸ್ ಜಿಯೋ ಬಳಕೆದಾರರು ಈಗ ಟ್ರೂ 5G ಸೇವೆ ಪಡೆಯುತ್ತಿದ್ದಾರೆ.

Also Read  ಬೆಂಕಿ ಅವಘಡ: ನಾರಿನ ಘಟಕ ಸಂಪೂರ್ಣ ನಾಶ‌…

error: Content is protected !!
Scroll to Top