ಸರಕಾರಿ ಶಾಲೆಗಳ ಚಾಕ್‌ಪೀಸ್‌ಗೂ ತಟ್ಟಿದ ಅನುದಾನ ಬಿಸಿ !                

(ನ್ಯೂಸ್ ಕಡಬ)newskadab.com ಬೆಳ್ತಂಗಡಿ, ಜ.18. ಸರಕಾರದ ನೇರ ನಿರ್ಲಕ್ಷ್ಯ ಹಾಗೂ ಖಾಸಗೀಕರಣದ ಮೇಲಾಟದಿಂದ ಕೆಲವೇ ವರ್ಷಗಳಲ್ಲಿ ಸರಕಾರಿ ಶಾಲೆಗಳು ಸಂಪೂರ್ಣ ನಶಿಸುವ ಭೀತಿ ಎದುರಾಗಿದೆ. ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದರೂ ಶಾಲೆಗಳ ನಿರ್ವಹಣೆಗೆ ಅನುದಾನ ಸಾಲುತ್ತಿಲ್ಲ.

ಕಟ್ಟಡದ ಅವ್ಯವಸ್ಥೆ, ಕಲಿಕೋಪಕರಣಗಳ ಕೊರತೆ ಮೇಲ್ನೋಟಕ್ಕೆ ಕಂಡರೆ ಇದೀಗ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳೆರಡರ ಸೀಮೆಸುಣ್ಣ (ಚಾಕ್‌ಪೀಸ್‌) ಕ್ಕೂ ಅನುದಾನ ಸಿಗದೆ ಶಿಕ್ಷಕರೇ ಬೇಡುವ ಪರಿಸ್ಥಿತಿ ಬಂದಿದೆ. ಆ ಮಟ್ಟಿಗೆ ಸರಕಾರವು ತನ್ನ ಶಾಲೆಗಳನ್ನು ಬಡವಾಗಿಸಿದೆ.

ಸರಕಾರಿ ಶಾಲೆಗಳಿಗೆ ವಿದ್ಯುತ್‌ ಬಿಲ್‌, ಸೀಮೆಸುಣ್ಣ, ಡಸ್ಟರ್‌, ಕಚೇರಿ ದಾಖಲೆ ಪುಸ್ತಕ, ಹಾಜರಾತಿ ಪುಸ್ತಕ, ಕಟ್ಟಡದ ಸಣ್ಣಪುಟ್ಟ ದುರಸ್ತಿ, ಕ್ರೀಡಾ ಸಾಮಗ್ರಿ, ದಿನಪತ್ರಿಕೆ, ವಾರಪತ್ರಿಕೆ, ಸ್ವತ್ಛತೆ ವೆಚ್ಚ, ಶೌಚಾಲಯ ಮತ್ತು ಕುಡಿವ ನೀರಿನ ನಿರ್ವಹಣೆ ಸಹಿತ ಇತರ ಸಲಕರಣೆ ಖರೀದಿಗಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನಿರ್ದಿಷ್ಟ ಅನುದಾನ ನೀಡಲಾಗುತ್ತಿತ್ತು.

Also Read  ಎರಡು ಬುಲೆಟ್ ರೈಲು ನಿರ್ಮಾಣಕ್ಕೆ ಗುತ್ತಿಗೆ ಪಡೆದ ಬಿಇಎಂಎಲ್‌

 

error: Content is protected !!
Scroll to Top