(ನ್ಯೂಸ್ ಕಡಬ)newskadab.com ನವದೆಹಲಿ, ಜ.18. ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ರೈತರಿಗೆ ಅನೇಕ ಯೋಜನೆಗಳನ್ನ ಲಭ್ಯವಾಗುವಂತೆ ಮಾಡುತ್ತಿದೆ ಮತ್ತು ಜಾರಿಗೊಳಿಸುತ್ತಿದೆ. ಇದರ ಭಾಗವಾಗಿ, 2019ರಲ್ಲಿ ರೈತರಿಗೆ ಸಹಾಯ ಮಾಡಲು ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನ ಪ್ರಾರಂಭಿಸಿದರು ಅನ್ನೋದು ತಿಳಿದಿರುವ ಸಂಗತಿ.
ಈ ಯೋಜನೆಯಡಿ ಅರ್ಹ ರೈತರಿಗೆ ಮೂರು ಕಂತುಗಳಲ್ಲಿ 2 ಸಾವಿರ ರೂ.ನಂತೆ ವರ್ಷಕ್ಕೆ 6 ಸಾವಿರ ರೂ.ಗಳನ್ನ ರೈತರ ಖಾತೆಗೆ ಜಮಾ ಮಾಡಲಾಗ್ತಿದೆ. ಅದ್ರಂತೆ, ಇಲ್ಲಿಯವರೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ರೈತರಿಗೆ 12 ಕಂತುಗಳಲ್ಲಿ ಹಣವನ್ನ ನೀಡಿದೆ. ಈಗ ಪಿಎಂ ಕಿಸಾನ್ನ 13ನೇ ಕಂತಿಗಾಗಿ ಲಕ್ಷಾಂತರ ರೈತರು ಹಣಕ್ಕಾಗಿ ಕಾಯುತ್ತಿದ್ದಾರೆ.
ಈ ಕ್ಷಣದಲ್ಲಿ ರೈತರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಕಿಸಾನ್ ನಗದನ್ನ 6000 ಸಾವಿರದಿಂದ 8000ಕ್ಕೆ ಹೆಚ್ಚಿಸಲು ಪ್ರಧಾನಿ ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ.