ಪುತ್ತೂರು: ಯುವತಿಗೆ ಚೂರಿಯಿಂದ ಇರಿತ ಪ್ರಕರಣ !!   ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadab.com  ಪುತ್ತೂರು, ಜ.18. ಮುಂಡೂರು ಕಂಪದಲ್ಲಿ ಯುವತಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಯಶ್ರಿ(23)ನ್ನು ಕನಕಮಜಲು ನಿವಾಸಿ ಉಮೇಶ್ ನಿನ್ನೆ ಮನೆಗೆ ನುಗ್ಗಿ ಚೂರಿಯಿಂದ ಇರಿದು ಕೊಲೆ ಮಾಡಿದ್ದ.

ಉಮೇಶ್, ಜಯಶ್ರಿಯ ಸಂಬಂಧಿಕನಾಗಿದ್ದು ಆಗಾಗ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಆತನ ನಡವಳಿಕೆಯಿಂದ ಬೇಸತ್ತು ಜಯಶ್ರೀ ಇತ್ತೀಚೆಗೆ ಆತನಿಂದ ದೂರ ಸರಿದಿದ್ದಳು, ಇದೇ ಸಿಟ್ಟಿನಲ್ಲಿ ಆರೋಪಿ ಕೃತ್ಯ ಎಸಗಿದ್ದಾನೆ ಎನ್ನುವುದು ತಿಳಿದು ಬಂದಿದೆ.

Also Read  ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಕಡಬ ತಾಲೂಕು ಅಧ್ಯಕ್ಷ ಎಸ್ಡಿಪಿಐ ಪಕ್ಷಕ್ಕೆ ಸೇರ್ಪಡೆ

error: Content is protected !!
Scroll to Top