ನಿವೃತ್ತ ರೈಲ್ವೆ ಅಧಿಕಾರಿಗೆ ಸೇರಿದ 17 ಕೆ.ಜಿ ಚಿನ್ನ ವಶ !

(ನ್ಯೂಸ್ ಕಡಬ)newskadab.com ನವದೆಹಲಿ, ಜ.18. ಭುವನೇಶ್ವರದಲ್ಲಿ ರೈಲ್ವೆಯ ನಿವೃತ್ತ ಪ್ರಧಾನ ಮುಖ್ಯ ವ್ಯವಸ್ಥಾಪಕರೊಬ್ಬರಿಗೆ (ವಾಣಿಜ್ಯ) ಸಂಬಂಧಿಸಿದ ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದ್ದು, 17 ಕೆ.ಜಿ ಚಿನ್ನ ಮತ್ತು ₹1.57 ಕೋಟಿ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕಳೆದ ವರ್ಷ ನವೆಂಬರ್‌ನಲ್ಲಿ ನಿವೃತ್ತರಾಗಿದ್ದ 1987ರ ಬ್ಯಾಚಿನ ಭಾರತೀಯ ರೈಲ್ವೆ ಸಂಚಾರ ಸೇವಾ ಅಧಿಕಾರಿ ಪ್ರಮೋದ್ ಕುಮಾರ್ ಜೇನಾ ಅವರ ವಿರುದ್ಧ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಜ.3ರಂದು ಪ್ರಕರಣ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ‘ಈ ವೇಳೆ ₹1.57 ಕೋಟಿ ನಗದು, ಅಂದಾಜು 8ರಿಂದ 10 ಕೋಟಿ ರೂಪಾಯಿ ಮೌಲ್ಯದ 17 ಕೆ.ಜಿ ಚಿನ್ನ, ₹2.25 ಕೋಟಿ ಮೊತ್ತದ ಬ್ಯಾಂಕ್‌ ಮತ್ತು ಅಂಚೆ ಠೇವಣಿ ರಸೀದಿಗಳು ಮತ್ತು ಆಸ್ತಿ ದಾಖಲೆಗಳು ಲಭ್ಯವಾಗಿವೆ’ ಎಂದು ತಿಳಿಸಿದ್ದಾರೆ.

Also Read  ಉಡುಪಿ :ಸ್ವಚ್ಛತಾ ಸೇವಾ ಕೈಂಕರ್ಯದಲ್ಲಿ ಮಂಗಳಮುಖಿಯರ ಸಾಥ್

error: Content is protected !!
Scroll to Top