ಯಾದಗಿರಿಯ ನಾರಾಯಣಪುರ ಎಡದಂಡೆ ಕಾಲುವೆ ಯೋಜನೆ ➤ಪ್ರಧಾನಿ ಮೋದಿಯಿಂದ ನಾಳೆ ಉದ್ಘಾಟನೆ

(ನ್ಯೂಸ್ ಕಡಬ) newskadaba.com, ಯಾದಗಿರಿ, ಜ.18. ನಾಳೆ ಮೋದಿಯವರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೆಕಲ್ ಗ್ರಾಮದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಎಡದಂಡೆ ನಾಲೆಯನ್ನು ಉದ್ಘಾಟಿಸಲಿದ್ದಾರೆ.

ಈ ಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ಈ ಯೋಜನೆಯಿಂದ ನೀರು ಹರಿಸುವ ಉದ್ದೇಶ ಸರ್ಕಾರದ್ದಾಗಿದೆ. ನಾರಾಯಣಪುರ ಅಣೆಕಟ್ಟನ್ನು ಆಲಮಟ್ಟಿ ಅಣೆಕಟ್ಟಿನ ಕೆಳಭಾಗದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿ 1982 ರಲ್ಲಿ ಕಾರ್ಯಾರಂಭ ಮಾಡಿತು.

ಈ ಜಲಾಶಯವು ಎಡ ಮತ್ತು ಬಲದಂಡೆ ಕಾಲುವೆಗಳು ಮತ್ತು ಏತ ನೀರಾವರಿ ಜಾಲಗಳ ಮೂಲಕ ವಿಜಯಪುರ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಸುಮಾರು 5.40 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸುತ್ತದೆ. ನಾರಾಯಣಪುರ ಎಡದಂಡೆ ಕಾಲುವೆಯು ಕಮಾಂಡ್ ಪ್ರದೇಶಕ್ಕೆ 4.50 ಲಕ್ಷ ಹೆಕ್ಟೇರ್‌ಗೆ ನೀರು ಸರಬರಾಜು ಮಾಡುವ ಮುಖ್ಯ ದಾರಿಯಾಗಿದ್ದು, ಕಲಬುರಗಿ, ಯಾದಗಿರಿ ಮತ್ತು ವಿಜಯಪುರದ ದೀರ್ಘಕಾಲಿಕ ಬರಪೀಡಿತ ಜಿಲ್ಲೆಗಳಲ್ಲಿ ಹರಡಿದೆ. ಹುಣಸಗಿ, ಶಹಾಪುರ, ಮುಡಬಾಳ, ಜೇವರ್ಗಿ, ಇಂಡಿ ಶಾಖಾ ಕಾಲುವೆಗಳು ಹಾಗೂ ಇಂಡಿ ಏತ ಕಾಲುವೆ ಮೂಲಕ 10 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

Also Read  ಕರ್ನಾಟಕ ಬಂದ್ ಗೆ ಕರೆ ನೀಡಿದವರ ಆಸ್ತಿ ಜಪ್ತಿ ಮಾಡಿ ➤ ಡಿ.5ರ ಬಂದ್ ವಿರೋಧಿಸಿ ಪ್ರತಿಭಟನೆ

error: Content is protected !!
Scroll to Top