ಮಂಗಳೂರು: ಜ. 21ರಂದು ತಾರಸಿ, ಕೈತೋಟ ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 18. ಸಿರಿ ತೋಟಗಾರಿಕಾ ಸಂಘದಿಂದ ಇದೇ ಜ. 21ರಂದು ಕೈತೋಟ ಮತ್ತು ತಾರಸಿ ತೋಟ ತರಬೇತಿಯನ್ನು ನಗರದ ಕದ್ರಿ ಬಾಲಭವನದಲ್ಲಿ (ಕದ್ರಿ ಉದ್ಯಾನವನದ ಹತ್ತಿರ) ಹಮ್ಮಿಕೊಳ್ಳಲಾಗಿದೆ.

ಆಸಕ್ತರು ಮಂಗಳೂರಿನ ಬೆಂದೂರ್ ವೆಲ್ ನಲ್ಲಿರುವ ಸಿರಿ ತೋಟಗಾರಿಕಾ ಸಂಘದಲ್ಲಿ ತರಬೇತಿ ಶುಲ್ಕ ಪಾವತಿಸಿ ಜ.20ರೊಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9845523944 ಸಂಪರ್ಕಿಸುವಂತೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ನೂಜಿಬಾಳ್ತಿಲ: ಶಿಕ್ಷಕರ ದಿನಾಚರಣೆ

error: Content is protected !!
Scroll to Top