ಸಾವಿರಾರು ನೌಕರರನ್ನು ವಜಾ ಮಾಡಿದ ಮೈಕ್ರೋಸಾಫ್ಟ್ ಕಂಪನಿ

(ನ್ಯೂಸ್ ಕಡಬ)newskadab.com ನವದೆಹಲರ, ಜ.18. ಮೈಕ್ರೋಸಾಫ್ಟ್ ಕಂಪೆನಿ ಹಲವು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಿದೆ. ಸಾಫ್ಟ್ ವೇರ್ ದೈತ್ಯ ಕಂಪೆನಿ ಶೇಕಡಾ 5ರಷ್ಟು ನೌಕರರನ್ನು ಅಂದರೆ ಸುಮಾರು 11 ಸಾವಿರ ಮಂದಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಮೈಕ್ರೋಸಾಫ್ಟ್ ಕಂಪೆನಿಯ ಮಾನವ ಸಂಪನ್ಮೂಲ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಸಾವಿರಾರು ಮಂದಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗುತ್ತದೆ. ಅಮೆರಿಕದ ತಂತ್ರಜ್ಞಾನ ವಲಯದಲ್ಲಿ ಕೆಲಸದಿಂದ ವಜಾಗೊಳಿಸುವಿಕೆ ನಡೆ ಇತ್ತೀಚಿನದ್ದಾಗಿದೆ. ಇತ್ತೀಚೆಗೆ ಅಮೆಜಾನ್ .ಕಾಂ ಮತ್ತು ಮೆಟಾ ಪ್ಲಾಟ್ ಫಾರ್ಮ್ ಇಂಕ್ ಕಂಪೆನಿಗಳು ಸಹ ಜಾಗತಿಕ ಮಟ್ಟದಲ್ಲಿ ಆರ್ಥಿಕ ನಿಧಾನಗತಿ ಮತ್ತು ಬೇಡಿಕೆಯ ಇಳಿಕೆ ಹಿನ್ನೆಲೆಯಲ್ಲಿ ಸಾವಿರಾರು ನೌಕರರನ್ನು ಸೇವೆಯಿಂದ ವಜಾಗೊಳಿಸುವುದಾಗಿ ಹೇಳಿತ್ತು. ಮೈಕ್ರೋಸಾಫ್ಟ್ ಕಂಪೆನಿಯಲ್ಲಿ 2,21,000 ಖಾಯಂ ನೌಕರರಿದ್ದು ಅವರಲ್ಲಿ 1,22,000 ಮಂದಿ ಅಮೆರಿಕದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ 99,0000 ಇದ್ದಾರೆ ಎಂದು ಕಳೆದ ವರ್ಷದ ಜೂನ್ 30ರ ಅಂಕಿಅಂಶ ಹೇಳುತ್ತದೆ.

Also Read  ವಿಶೇಷ ಪೊಲೀಸ್ ತಂಡದಿಂದ ಐವರು ಉಗ್ರರ ಅರೆಷ್ಟ್

 

 

error: Content is protected !!
Scroll to Top