ಇಬ್ಬರು ಪುತ್ರಿಯರ ಜತೆ ನದಿಗೆ ಹಾರಿದ ತಾಯಿ ➤ಮೂವರ ಮೃತದೇಹ ನದಿಯಲ್ಲಿ ಪತ್ತೆ..!

(ನ್ಯೂಸ್ ಕಡಬ)newskadab.com ಬಾಗಲಕೋಟೆ, ಜ.18. ವಯಸ್ಸಿಗೆ ಬಂದ ಹೆಣ್ಣುಮಕ್ಕಳಿಬ್ಬರ ಸಹಿತ ತಾಯಿಯೊಬ್ಬರು ನದಿಗೆ ಹಾರಿದ ಪ್ರಕರಣವೊಂದು ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮಲಪ್ರಭಾ ಸೇತುವೆ ಬಳಿ ಈ ಪ್ರಕರಣ ನಡೆದಿದ್ದು, ಡೆತ್​ನೋಟ್ ಕೂಡ ಪತ್ತೆಯಾಗಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಉಮಾ ಸುರೇಶ ಮಾಸರೆಡ್ಡಿ (42) ಎಂಬಾಕೆ ತನ್ನ ಮಕ್ಕಳಾದ ಐಶ್ವರ್ಯ (23) ಹಾಗೂ ಸೌಂದರ್ಯ (19) ಅವರೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಮತಗಿ ಪಟ್ಟಣದ ಮಲಪ್ರಭಾ ಸೇತುವೆ ಬಳಿ ಇವರ ಶವ ಪತ್ತೆಯಾಗಿದೆ. ಪುತ್ರಿಯರಲ್ಲಿ ಐಶ್ವರ್ಯ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಹಾಗೂ ಸೌಂದರ್ಯ ಬಾಗಲಕೋಟೆಯಲ್ಲಿ ಬಿಎಸ್​ಸಿ ವ್ಯಾಸಂಗ ಮಾಡುತ್ತಿದ್ದು, ತಾಯಿ ಡೆತ್​ನೋಟ್ ಬರೆದಿಟ್ಟು, ಇಬ್ಬರೂ ಪುತ್ರಿಯರೊಂದಿಗೆ ನದಿಗೆ ಹಾರಿದ್ದರು. ಕೌಟುಂಬಿಕ ಸಮಸ್ಯೆಯಿಂದ ಈ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Also Read  ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಮೇಲಿನ ಗುಂಡಿನ ದಾಳಿ ಪ್ರಕರಣ ➤  ಮೂವರು ಅರೆಸ್ಟ್..!

 

 

error: Content is protected !!
Scroll to Top