ಆಟೋ ಚಾಲಕನಿಗೆ ಮಚ್ಚು ತೋರಿಸಿ 10 ಸಾವಿರ ರೂ. ದೋಚಿದ ದರೋಡೆಕೋರರು..!

Theft, crime, Robbery

(ನ್ಯೂಸ್ ಕಡಬ)newskadab.com ಬೆಂಗಳೂರು, ಜ.18. ಬೆಂಗಳೂರಿನಲ್ಲಿ ದರೋಡೆಕೋರರ ಅಟ್ಟಹಾಸ ಮುಂದುವರೆದಿದ್ದು, ಆಟೋ ಪ್ರಯಾಣಿಕ ಬಳಿ 10 ಸಾವಿರ ರೂ. ದರೋಡೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಡೆದಿದೆ.

ಬೆಂಗಳೂರಿನ ಮೆಜೆಸ್ಟಿಕ್ ನಿಂದ ಹೆಣ್ಣೂರುಬಂಡೆಗೆ ಆಟೋದಲ್ಲಿ ತೆರಳುತ್ತಿದ್ದ ಪ್ರಯಾಣಿಕನನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಮಚ್ಚು ತೋರಿಸಿ 10 ಸಾವಿರ ರೂ. ದೋಚಿದ್ದಾರೆ. ಡಿಯೋದಲ್ಲಿ ಆಟೋ ಹಿಂಬಾಲಿಸಿ ದುಷ್ಕರ್ಮಿಗಳು ಬಂದಿದ್ದು, ಮಚ್ಚು ತೋರಿಸಿ 10 ಸಾವಿರ ರೂ. ದರೋಡೆ ಮಾಡಿದ್ದಾರೆ ಎನ್ನಲಾಗಿದೆ. ಅದೇ ರಸ್ತೆಯಲ್ಲಿ ಕಾರು ಬಂದಿದ್ದರಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ದರೋಡೆ ಬಗ್ಗೆ ಹೆಣ್ಣೂರು ಪೊಲೀಸ್ ಠಾಣೆಗೆ ಆಟೋ ಚಾಲಕ ಮಾಹಿತಿ ನೀಡಿದ್ದು, ಸ್ಥಳಕ್ಕೆ ಹೆಣ್ಣೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆ- ವಾರ್ಷಿಕ ಬಹುಮಾನ ವಿತರಣ ಕಾರ್ಯಕ್ರಮ

 

error: Content is protected !!