ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್

(ನ್ಯೂಸ್ ಕಡಬ)newskadab.com ನವದೆಹಲಿ, ಜ.18. ಈ ವರ್ಷ ಖಾಸಗಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಈ ವರ್ಷ ವೇತನ ಶೇಕಡ 9.8 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಜಾಗತಿಕ ಆರ್ಥಿಕ ಬಿಕಟ್ಟಿನಿಂದ 2023ರಲ್ಲಿ ಕಾರ್ಪೊರೇಟ್ ವಲಯದಲ್ಲಿ ಅನೇಕ ಸವಾಲುಗಳು ಎದುರಾಗಿದ್ದರೂ ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ಉದ್ಯೋಗಿಗಳ ವೇತನ ಏರಿಕೆಯಾಗಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಕಾರ್ನ್ ಪೆರ್ರಿ ಸಮೀಕ್ಷೆಯ ಪ್ರಕಾರ, ಈ ವರ್ಷ ಉದ್ಯೋಗಿಗಳ ವೇತನ ಸರಾಸರಿ ಶೇಕಡ 9.8 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರತಿಭಾನುವಂತ ಉದ್ಯೋಗಿಗಳಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವೇತನ ಏರಿಕೆಯಾಗಬಹುದು. ಪ್ರತಿಭಾವಂತ ಉದ್ಯೋಗಿಗಳು ಕಂಪನಿ ಬಿಟ್ಟು ಹೋಗದಂತೆ ನೋಡಿಕೊಳ್ಳಲು ಕಂಪನಿಗಳು ಗಮನಹರಿಸುತ್ತಿದ್ದು, ಹೀಗಾಗಿ ಉದ್ಯೋಗಿಗಳಿಗೆ ಹೆಚ್ಚಿನ ವೇತನ, ಭಡ್ತಿ ನೀಡಲು ಮುಂದಾಗಿವೆ.

Also Read  ಬಂಗಾಳದಲ್ಲಿ ಮತ್ತೆ ಮಾಜಿ ಟಿಎಂಸಿ ನಾಯಕ ಮುಕುಲ್‌ ರಾಯ್‌ ಗೊಂದಲ.!!

 

error: Content is protected !!
Scroll to Top