ಕುಡಿದ ಮತ್ತಿನಲ್ಲಿ ಟವರ್ ಏರಿ ವ್ಯಕ್ತಿಯ ಹೈಡ್ರಾಮ ➤ ಸ್ಥಳಕ್ಕೆ ಜಡ್ಜ್ ಬರುವಂತೆ ಪಟ್ಟು..!

(ನ್ಯೂಸ್ ಕಡಬ) newskadaba.com ಧಾರವಾಡ, ಜ. 18. ಕುಡಿದ ಮತ್ತಿನಲ್ಲಿ ಮೊಬೈಲ್ ಟವರ್ ಏರಿ ವ್ಯಕ್ತಿಯೋರ್ವ ಹೈಡ್ರಾಮ ಸೃಷ್ಟಿಸಿರುವ ಘಟನೆ ಧಾರವಾಡದಲ್ಲಿ ವರದಿಯಾಗಿದೆ.

 

 

ಜಾವೇದ್ ದಲಾಯತ್ ಎಂಬಾತ ಮದ್ಯ ಸೇವಿಸಿ ಬಂದು, ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೊಬೈಲ್ ಟವರ್‌ ಏರಿ ಕುಳಿತಿದ್ದಾನೆ ಎನ್ನಲಾಗಿದೆ. ಇದನ್ನು ಗಮನಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಈತನ ಮನವೊಲಿಸಲು ಪ್ರಯತ್ನಿಸಿದರಾದರೂ, ನ್ಯಾಯಾಧೀಶರು ಬಂದರೆ ಮಾತ್ರ ಕೆಳಗಿಳಿಯುತ್ತೇನೆ ಎಂದು ಈತ ಪಟ್ಟು ಹಿಡಿದಿದ್ದ. ಎರಡು ಗಂಟೆಗೂ ಅಧಿಕ ಸಮಯ ಟವರ್ ನಲ್ಲೇ ಕುಳಿತಿದ್ದ ಈತನನ್ನು ಕೊನೆಗೂ ಮನವೊಲಿಸಿ ಕೆಳಗಿಳಿಸಲಾಗಿದೆ.

Also Read  ಮರದಿಂದ ಬಿದ್ದು ಪೊಲೀಸ್ ಪೇದೆ ಮೃತ್ಯು

error: Content is protected !!
Scroll to Top