ಬಂಧನದ ಭೀತಿ ಆಸ್ಪತ್ರೆಗೆ ದಾಖಲಾದ ಇನ್ಸ್​​ಪೆಕ್ಟರ್ ಪ್ರವೀಣ್..! 

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 17. ನಕಲಿ ಕೇಸ್ ಪ್ರಕರಣದಲ್ಲಿ ಅರೆಸ್ಟ್ ಆಗುವ ಭೀತಿಯಿಂದ ಕಾಟನ್ ಪೇಟೆ ಇನ್ಸ್‌ಪೆಕ್ಟರ್ ಆಗಿದ್ದ ಪ್ರವೀಣ್ ಅವರು ಆಸ್ಪತ್ರೆಗೆ ದಾಖಲಾಗಿರುವ ಕುರಿತು ವರದಿಯಾಗಿದೆ.

ಇನ್ಸ್​ಪೆಕ್ಟರ್ ಪ್ರವೀಣ್, ಸ್ಯಾಂಟ್ರೋ ರವಿ ಮಾತು ಕೇಳಿ ಕೇಸ್ ಹಾಕಿದ್ದರು, ಮೇಲ್ನೋಟಕ್ಕೆ ಇದು ಕರ್ತವ್ಯಲೋಪ ಎಂದು DCP ವರದಿ ಕೊಟ್ಟಿದ್ದಾರೆ. ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಈ ಬಗ್ಗೆ ವರದಿ ನೀಡಿದ್ದು, ಡಿಸಿಪಿ ವರದಿ ಆಧರಿಸಿ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದೆ. ಸಿಸಿಬಿ ತನಿಖೆ ಆರಂಭವಾಗುತ್ತಿದ್ದಂತೆ ಪ್ರವೀಣ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

Also Read  ವಳಲಂಬೆ: ಕರೆಂಟ್‌ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

error: Content is protected !!
Scroll to Top