ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರ ಎನ್ ಕೌಂಟರ್

(ನ್ಯೂಸ್ ಕಡಬ)newskadaba.com  ಜಮ್ಮು, ಜ.17. ಕಣಿವೆ ಪ್ರದೇಶ ಜಮ್ಮು-ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತ್ಯೆರಾಗಿದ್ದಾರೆ.  ಹತ್ಯೆಗೀಡಾದ ಉಗ್ರರನ್ನು ಅರ್ಬಾಸ್ ಮಿರ್ ಮತ್ತು ಶಾಹಿದ್ ಶೇಖ್ ಎಂದು ಗುರುತಿಸಲಾಗಿದ್ದು ಇವರು ಪುಲ್ವಾಮದವರಾಗಿದ್ದು ಭಯೋತ್ಪಾದಕ ಸಂಘಟನೆ ಎಲ್ ಇಟಿ ಜೊತೆ ಸಂಪರ್ಕ ಹೊಂದಿದವರಾಗಿದ್ದಾರೆ.

ಇತ್ತೀಚೆಗೆ ಎನ್ ಕೌಂಟರ್ ನಲ್ಲಿ ಇಬ್ಬರೂ ತಪ್ಪಿಸಿಕೊಂಡಿದ್ದರು. ಬುದ್ಗಾಮದಲ್ಲಿ ಸೇನೆಯ ಯೋಧರು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಶಂಕಿತ ವಾಹನವನ್ನು ನಿಲ್ಲಿಸಿದರು. ಬಳಿಕ ಗುಂಡಿನ ಚಕಮಕಿ ನಡೆಯಿತು. ಈ ಬಾರಿ ತಪ್ಪಿಸಿಕೊಳ್ಳಲಾಗದೆ ಹತ್ಯೆರಾಗಿದ್ದಾರೆ. ಸೇನಾಪಡೆ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.

Also Read  ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವುದು ಖಚಿತ ➤ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್

 

error: Content is protected !!
Scroll to Top