ಮಂಗಳೂರು: ವಿಜಯ ಕುಮಾರ್ ರವರು ನೋಡಲ್ ಅಧಿಕಾರಿಯಾಗಿ ನೇಮಕ

(ನ್ಯೂಸ್ ಕಡಬ)newskadaba.com ಮಂಗಳೂರು, ಜ.17. ಇಲ್ಲಿನ ಕಂದಾಯ ಅಧಿಕಾರಿ ವಿಜಯ ಕುಮಾರ್ ಅವರನ್ನು ಬೀದಿ ಬದಿ ವ್ಯಾಪಾರಸ್ಥರಿಗೆ ಮತ್ತು ಅವರ ಕುಟುಂಬದವರಿಗೆ ಪಿಎಂ ಸ್ವನಿಧಿ ಮಹೋತ್ಸವ ಆಚರಣೆ ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಜನಪ್ರತಿನಿಧಿಗಳು, ಮಂಗಳೂರು ಮಹಾನಗರಪಾಲಿಕೆ ನಗರ ಬಡತನ ನಿರ್ಮೂಲನಾ ಕೋಶ, ಜಿಲ್ಲಾ ಕೌಶಲ್ಯಾಭಿವೃದ್ಧಿ ಮತ್ತು ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿಯ ಸದಸ್ಯ ಅಧಿಕಾರಿಗಳನ್ನು ಸಮನ್ವಯಗೊಳಿಸಿಕೊಂಡು ಸ್ವನಿಧಿ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸುವಂತೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಅವರು ಸೂಚಿಸಿದ್ದಾರೆ.

Also Read  ಉಜಿರೆ ರುಡ್‍ಸೆಟ್‍ನಲ್ಲಿ ಹಲವು ಉಚಿತ ತರಬೇತಿಗಳು

 

error: Content is protected !!
Scroll to Top