ನೇಪಾಳದಲ್ಲಿ ನಡೆದ ವಿಮಾನ ದುರಂತ..! ➤ ಮೃತರ ಸಂಖ್ಯೆ 70ಕ್ಕೆ ಏರಿಕೆ

(ನ್ಯೂಸ್ ಕಡಬ)newskadaba.com ನೇಪಾಳ, ಜ.17. ನೇಪಾಳದ ಪೋಖರಾ ಪ್ರದೇಶದಲ್ಲಿ ಸಂಭವಿಸಿದ ಯೇತಿ ಏರ್‌ಲೈನ್ಸ್ ವಿಮಾನ ದುರಂತ ಸ್ಥಳದಲ್ಲಿ ಮತ್ತೆ ಇಬ್ಬರ ಶವ ಪತ್ತೆಯಾಗಿದೆ. ಇದರೊಂದಿಗೆ ಸಾವಿನ ಸಂಖ್ಯೆ 70ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ನಾಪತ್ತೆಯಾಗಿದ್ದ ಮತ್ತೊಬ್ಬ ಪ್ರಯಾಣಿಕನ ಶವ ತಡವಾಗಿ ಪತ್ತೆಯಾಗಿದೆ. ಇನ್ನೂ ಇಬ್ಬರು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ.

ಸ್ಥಳದಿಂದ ಇದುವರೆಗೆ ಒಟ್ಟು 70 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ. ಐವರು ಭಾರತೀಯರು ಸೇರಿದಂತೆ 72 ಜನರಿದ್ದ ಯೇತಿ ಏರ್‌ಲೈನ್ಸ್ ಪ್ರಯಾಣಿಕ ವಿಮಾನವು ಕೇಂದ್ರ ನೇಪಾಳದ ರೆಸಾರ್ಟ್ ನಗರವಾದ ಪೊಖರಾದಲ್ಲಿ ಹೊಸದಾಗಿ ಉದ್ಘಾಟನೆಯಾದ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ನದಿಯ ಕಮರಿಯಲ್ಲಿ ಪತನಗೊಂಡಿತ್ತು.

Also Read  ರಿಮೋಟ್‌ನಲ್ಲೇ ʻತೂಕದ ಸ್ಕೇಲ್ ಕಂಟ್ರೋಲ್ ಮಾಡಿ ಪಂಗನಾಮʼ

 

error: Content is protected !!
Scroll to Top