(ನ್ಯೂಸ್ ಕಡಬ)newskadaba.com ಕೊಡಗು, ಜ.16. ಕೃಷಿ ಕ್ಷೇತ್ರದಲ್ಲಿ ಇದೀಗ ಕಾರ್ಮಿಕರ ಕೊರತೆ ಎದುರಾಗಿದ್ದರೂ ಹವಾಮಾನ ವೈಫರೀತ್ಯ ಮತ್ತು ವನ್ಯ ಜೀವಿಗಳ ಸಂಘರ್ಷದಿಂದಾಗಿ ಕೊಡಗಿನಾದ್ಯಂತ ಭತ್ತದ ಬೇಸಾಯ ಹಿಂದೆ ಬಿದಿದ್ದೆ. ಕೃಷಿ ಭೂಮಿ ಕಡಿಮೆಯಾಗಿರುವುದು ಹಾಗೂ ಇತರ ಕ್ಷೇತ್ರಗಳಲ್ಲಿ ಬೇಡಿಕೆಯಿಂದಾಗಿ ಭತ್ತದ ಕೊಯ್ಲು ಸಮಯದಲ್ಲಿ ಹೊರಗಿನಿಂದ ಕಾರ್ಮಿಕರು ಜಿಲ್ಲೆಗೆ ವಲಸೆ ಬರುವವರ ಸಂಖ್ಯೆಯೂ ಕ್ಷೀಣಿಸಿದೆ.
ಕಾರ್ಮಿಕರ ತೀವ್ರ ಕೊರತೆಯಿಂದಾಗಿ, ಸಾಂಪ್ರದಾಯಿಕ ರೈತರು ಈಗ ಭತ್ತ ಕಟಾವು ಯಂತ್ರಗಳ ಸಹಾಯವನ್ನು ಪಡೆಯುತ್ತಿದ್ದಾರೆ, ಅದು ದುಬಾರಿಯಾಗಿದೆ. ಕಾರ್ಮಿಕರ ಕೊರತೆಯಿಂದ ಭತ್ತ ಕಟಾವು ಯಂತ್ರಗಳನ್ನು ಗಂಟೆಗೆ 3,000 ರೂ.ನಂತೆ ಬಾಡಿಗೆಗೆ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಜಿಲ್ಲೆಯ ಹೆಗ್ಗುಳ ಗ್ರಾಮದ ರೈತ ಹೂವಯ್ಯ ತಿಳಿಸಿದರು. ಒಂದು ಎಕರೆ ಭತ್ತ ಕಟಾವು ಮಾಡಲು ಕಟಾವು ಯಂತ್ರಗಳಿಗೆ ಕನಿಷ್ಠ 2.5 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಅವರು ವಿವರಿಸಿದರು. ಕೇವಲ ಒಂದು ಎಕರೆ ಭತ್ತ ಕೊಯ್ಲು ಮಾಡಲು, ಯಂತ್ರಗಳಿಗೆ ಕೇವಲ 7, 500 ರೂಪಾಯಿಗಳನ್ನು ಖರ್ಚು ಮಾಡುತ್ತೇವೆ ಎಂದು ಅವರು ಹೇಳಿದರು.