ಮೊದಲ ಎಲೆಕ್ಟ್ರಿಕ್​​​ ಬಸ್​’ಗೆ ಅಧಿಕೃತ ಚಾಲನೆ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.16. ಕೆ.ಎಸ್‍.ಆರ್.ಟಿ.ಸಿ ಯ ಮೊದಲ ಎಲೆಕ್ಟ್ರಿಕ್ ಬಸ್‍ಗೆ ಅಧಿಕೃತ ಚಾಲನೆ ಸಿಕ್ಕಿದ್ದು, ಕಳೆದ ಒಂದು ವಾರದಿಂದ ಡಿಪೋ ನಲ್ಲೇ ಪ್ರಾಯೋಗಿಕವಾಗಿ ಓಡಾಟ ನಡೆಸುತ್ತಿದ್ದ ಕೆಎಸ್​​​ಆರ್​​​ಟಿಸಿ ಎಲೆಕ್ಟ್ರಿಕ್​​​ ಬಸ್​ಗಳು ರಸ್ತೆಗೆ ಇಳಿದಿವೆ. ಮೆಜೆಸ್ಟಿಕ್​ ಕೆಎಸ್​​ಆರ್​​ಟಿಸಿ ನಿಲ್ದಾಣದ ಡಿಸಿ ಚಂದ್ರಶೇಖರ್ ಹಾಗೂ ಕೆಎಸ್​​​ಆರ್​​​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಲಕ್ಷ್ಮಣ್ ಅವರು ಮೆಜೆಸ್ಟಿಕ್ ಕೆಎಸ್​​​ಆರ್​​​ಟಿಸಿ ನಿಲ್ದಾಣದಲ್ಲಿ ಎಲೆಕ್ಟ್ರಿಕ್​ ಬಸ್​​ಗೆ ಚಾಲನೆ ನೀಡಿದ್ದಾರೆ.

ಬೆಂಗಳೂರು-ಮೈಸೂರು ನಡುವೆ ಮೊದಲ ಎಲೆಕ್ಟ್ರಿಕ್​​ ಬಸ್ ಸೇವೆ ಇಂದಿನಿಂದ ಆರಂಭವಾಗಿದೆ. ಎಕ್ಸ್​​​ಪ್ರೆಸ್ ವೇನಲ್ಲಿ ಈ ಕೆಎಸ್​ಆರ್​​ಟಿಸಿ ಎಲೆಕ್ಟ್ರಿಕ್ ಬಸ್ ಸಂಚರಿಸುತ್ತಿದೆ. ಕೆಎಸ್​​ಆರ್​ಟಿಸಿ ಎಲೆಕ್ಟ್ರಿಕ್​​​ ಬಸ್​​ನಲ್ಲಿ ವಿದ್ಯಾರ್ಥಿ ಪಾಸ್​​ಗೆ ಅವಕಾಶವಿಲ್ಲ. ಮುಂದಿನ ಮೂರು ತಿಂಗಳಲ್ಲಿ 50 ಕೆಎಸ್​​ಆರ್​ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರ ನಡೆಸಲಿವೆ. ಬೆಂಗಳೂರಿನ ಹತ್ತಿರದ ಜಿಲ್ಲೆಗಳಿಗೆ ಸಂಚರಿಸಲಿವೆ. 300 ಕಿ.ಮೀ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್​​ ಬಸ್ ಓಡಿಸಲು ಕೆಎಸ್​​ಆರ್​ಟಿಸಿ ನಿರ್ಧಾರ ಮಾಡಿದೆ.

Also Read  ನಾಳೆ(ನ.14) ನೆಲ್ಯಾಡಿಯಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ

 

 

error: Content is protected !!
Scroll to Top