ಡಾಕ್ಟರ್‌ ವೇಷ ಧರಿಸಿ ಕಳ್ಳತನ ! ➤ ರೋಗಿಯ ಚಿನ್ನದ ಸರ ಕದ್ದು ಪರಾರಿ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.16. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದುಡಿದು ಜೀವನ ಮಾಡಲು ಸಾವಿರಾರು ದಾರಿಗಳಿವೆ. ಆದರೂ, ದುಡಿದು ತಿನ್ನುವುದನ್ನು ಬಿಟ್ಟು ಇಲ್ಲೊಬ್ಬ ಖತರ್ನಾಕ್‌ ಮಹಿಳೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ವೈದ್ಯರ ವೇಷವನ್ನು ಧರಿಸಿಕೊಂಡು ಹೋಗಿ ರೋಗಿಗೆ ಚಿಕಿತ್ಸೆ ನೀಡುವುದಾಗಿ ಚಿಕಿತ್ಸಾ ಕೊಠಡಿಗೆ ತೆರಳಿ ಎಚ್ಚರವಿಲ್ಲದೆ ಮಲಗಿದ್ದ  ರೋಗಿಯ ಚಿನ್ನದ ಸರ ಮತ್ತು ಉಂಗುರವನ್ನು ಕದ್ದು ಪರಾರಿ ಆಗಿದ್ದಾಳೆ.

ನಾನಾ ವೇಷ ಧರಿಸಿ ಕಳ್ಳತನ ಮಾಡುವುದನ್ನೇ ರೂಢಿ ಮಾಡಿಕೊಂಡಿರುವ ಹಲವು ಆರೋಪಗಳಿಗೆ ಶಿಕ್ಷೆ ಆಗುವುದನ್ನು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ. ಆದರೆ, ಇಲ್ಲೊಬ್ಬ ಚಾಲಾಕಿ ಕಳ್ಳಿ ಕಳ್ಳತನ ಮಾಡುವುದಕ್ಕಾಗಿಯೇ ಡಾಕ್ಟರ್‌ ವೇಷ ಧರಿಸಿ ಆಸ್ಪತ್ರೆಗೆ ನುಗ್ಗಿರುವುದನ್ನು ನೋಡಿದರೆ ಎಂಥವರಿಗೂ ಆಶ್ಚರ್ಯವಾಗುವುದು. ಇನ್ನು ವೈದ್ಯರ ವೇಷ ಧರಿಸಿಕೊಂಡು ಹೋದ ಮಹಿಳೆ ಚಿಕಿತ್ಸಾ ಕೊಠಡಿಯ ಹೊರಗೆ ಕಾದು ಕುಳಿತಿದ್ದ ರೋಗಿಯ ಸಂಬಂಧಿಕರನ್ನು ಯಾಮಾರಿಸಿ ಚಿನ್ನದ ಒಡವೆಗಳನ್ನು ಕದ್ದು ಪರಾರಿ ಆಗಿದ್ದಾಳೆ ಎನ್ನುವುದು ಇನ್ನು ಆತಂಕಕಾರಿ ಆಗಿದೆ.

Also Read  ರಾಜ್ಯದಲ್ಲಿ ಕೋವಿಡ್ ಸಕ್ರಿಯ ಪ್ರಕರಣ ಇಳಿಕೆ

 

 

error: Content is protected !!
Scroll to Top