ಹೋರಿ ಬೆದರಿಸುವ ಸ್ಪರ್ಧೆ ➤  ಹೋರಿ ತಿವಿದು ಇಬ್ಬರು ಮೃತ್ಯು..!

(ನ್ಯೂಸ್ ಕಡಬ)newskadaba.com ಶಿವಮೊಗ್ಗ, ಜ.16. ಹೋರಿ ಬೆದರಿಸುವ ಹಬ್ಬದಲ್ಲಿ ಇಬ್ಬರು ಬಲಿಯಾಗಿರುವ ಪ್ರತ್ಯೇಕ ದುರ್ಘಟನೆಗಳು ಶಿವಮೊಗ್ಗ ತಾಲೂಕಿನ ಕೊನೆಗವಳ್ಳಿ ಗ್ರಾಮ ಹಾಗೂ ಸೊರಬ ತಾಲೂಕಿನ ಮಳ್ಳೂರು ಗ್ರಾಮದಲ್ಲಿ ನಡೆದಿವೆ.

ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಶಿವಮೊಗ್ಗ ತಾಲೂಕಿನ ಕೊನೆಗವಳ್ಳಿ ಗ್ರಾಮ ಹಾಗೂ ಸೊರಬ ತಾಲೂಕಿನ ಮಳ್ಳೂರು ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬವನ್ನು ಆಯೋಜನೆ ಮಾಡಲಾಗಿತ್ತು. ಕೊನಗವಳ್ಳಿಯಲ್ಲಿ ನಡೆದಿದ್ದ ಹೋರಿಬೆದರಿಸುವ ಸ್ಪರ್ಧೆಯನ್ನು ನೋಡಲು ಹೋಗಿದ್ದ ಸಂದರ್ಭದಲ್ಲಿ ಶಿವಮೊಗ್ಗದ ಆಲ್ಕೊಳ ನಿವಾಸಿ ಲೋಕೇಶ್ (32) ಎದೆಗೆ ಹೋರಿ ತಿವಿದು ಮೃತಪಟ್ಟಿದ್ದಾರೆ. ಇದೇ ವೇಳೆ 6 ಜನರಿಗೆ ಗಾಯಗಳಾಗಿದ್ದು ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೋರಿ ಬೆದರಿಸುವ ವೇಳೆ ಗಾಯಗೊಂಡಿದ್ದ ಲೋಕೇಶ್ ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

Also Read  ’ಅದಾನಿ ಏರ್ ಪೋರ್ಟ್’ ಆಗಿ ಬದಲಾವಣೆಯಾದ ಮಂಗಳೂರು ವಿಮಾನ ನಿಲ್ದಾಣ

 

error: Content is protected !!
Scroll to Top