ಕಾಸರಗೋಡು: ಮೊಬೈಲ್ ಕಳವು ಗೈದು ಲಾಕ್ ತೆರೆಯಲು ಯತ್ನ ➤ ಆರೋಪಿಯ ಬಂಧನ..!

crime, arrest, suspected

(ನ್ಯೂಸ್ ಕಡಬ)newskadaba.com  ಕಾಸರಗೋಡು, ಜ.16. ಮೊಬೈಲ್ ಕಳವು ಗೈದು ಲಾಕ್ ತೆರೆಯಲು ಮೊಬೈಲ್ ಮಳಿಗೆಗೆ ತಲುಪಿದ್ದ ಯುವಕ ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಸಿದ್ದೀಕ್ ಶಫೀಕ್ ಪರ್ಹಾನ್ (27) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಮಂಜೇಶ್ವರ ಹೊಸಬೆಟ್ಟು ಪಾಂಡ್ಯಾಲದ ಮಸೀದಿ ಸಮೀಪ ಮರದ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನ ಮೊಬೈಲ್ ನ್ನು ಪರ್ಹಾ ನ್ ಮೊಬೈಲ್ ಎಗರಿಸಿದ್ದು, ಆದರೆ ಮೊಬೈಲ್ ನೋಡಿದಾಗ ಅದು ಲಾಕ್ ಆಗಿತ್ತು ಅದನ್ನು ತೆರೆಯಲು ಆಗಿಲ್ಲ. ಇದರಿಂದ ಸಮೀಪದ ಮೊಬೈಲ್ ಮಳಿಗೆಗೆ ತೆರಳಿದ್ದಾನೆ. ಈತನ ವರ್ತನೆ ಬಗ್ಗೆ ಸಂಶಯ ಗೊಂಡ ಮೊಬೈಲ್ ಮಳಿಗೆ ಮಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಪೊಲೀಸರು ಮೊಬೈಲ್ ಅನ್ನು ಪರಿಶೀಲಿಸಿ ಯುವಕನನ್ನು ವಿಚಾರಣೆ ನಡೆಸಿದಾಗ ಮೊಬೈಲ್ ಅನ್ನು ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

Also Read  ಬಿಹಾರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು    ➤  ಬಂಟ್ವಾಳದ ಐವರು NIA ವಶಕ್ಕೆ

 

error: Content is protected !!
Scroll to Top