(ನ್ಯೂಸ್ ಕಡಬ) newskadaba.com, ದೆಹಲಿ ಜ. 16 .ತುಮಕೂರು ಪ್ಯಾಸೆಂಜರ್ ಆಟೋಗೆ ಇನೋವಾ ಕಾರು ಡಿಕ್ಕಿಯಾಗಿ ಓರ್ವ ಬಾಲಕ ಮೃತಪಟ್ಟಿದ್ದು, 8 ಜನರಿಗೆ ಗಂಭೀರ ಗಾಯವಾಗಿದೆ.
ಮೃತಪಟ್ಟ ಬಾಲಕನ್ನು ವರ್ಷಿತ್ ರೆಡ್ಡಿ(13) ಎಂದು ಗುರುತಿಸಲಾಗಿದೆ. ಪ್ಯಾಸೆಂಜರ್ ಆಟೋದಲ್ಲಿ ಸುಮಾರು 10ಜನರಿದ್ದರು. ಪೆನುಗೊಂಡದಿಂದ ಚಿತ್ರದುರ್ಗಕ್ಕೆ ಇನೋವಾ ಕಾರು ಹೋಗುತ್ತಿತ್ತು. ರೊದ್ದಂನಿಂದ ಪಾವಗಡ ಕಡೆ ಪ್ಯಾಸೆಂಜರ್ ಆಟೋ ಬರುತ್ತಿತ್ತು. ಎಂದು ತಿಳಿದು ಬಂದಿದೆ.