ಅಂತೂ ಇಂತೂ ಶಾಂತಿಮೊಗರಿಗೆ ಬಂತು ಸರಕಾರಿ‌ ಬಸ್ ► ಸ್ಥಳೀಯರ ಬಹುಕಾಲದ ಬೇಡಿಕೆ ಈಡೇರಿಸಿದ ಕೆಎಸ್ಸಾರ್ಟಿಸಿ ಧರ್ಮಸ್ಥಳ ಘಟಕ

(ನ್ಯೂಸ್ ಕಡಬ) newskadaba.com ಕಡಬ, ಡಿ.16. ಆಲಂಕಾರು, ಶಾಂತಿಮೊಗರು ಪರಿಸರದ ಜನರ ಹಲವು ಕಾಲದ ಬೇಡಿಕೆಯಾಗಿದ್ದ ಶಾಂತಿಮೊಗರು ಸೇತುವೆ ನಿರ್ಮಾಣಗೊಂಡು ಸಂಚಾರ ಆರಂಭಗೊಂಡ ಬೆನ್ನಲ್ಲೇ ಇದೀಗ ರಾಜ್ಯ ಸಾರಿಗೆ ಇಲಾಖೆಯು ಕೆಎಸ್ಸಾರ್ಟಿಸಿ ಬಸ್ ಸಂಚಾರವನ್ನು ಇದೇ ರಸ್ತೆಯ ಮೂಲಕ ಆರಂಭಿಸಿದೆ.

ಕಡಬ, ಆಲಂಕಾರು, ಶಾಂತಿಮೊಗರು, ಕುದ್ಮಾರು, ಸವಣೂರು ರಸ್ತೆಯ ಮೂಲಕ ಪುತ್ತೂರಿಗೆ ಗುರುವಾರದಂದು ಬಸ್ ಸಂಚಾರ ಆರಂಭಗೊಂಡಿದ್ದು, ಇಲ್ಲಿನ ಜನರ ಬಹುಕಾಲದ ಕನಸು ನನಸಾಗಿದೆ‌. ಶಾಂತಿಮೊಗರು ಮೂಲಕ ಬಸ್ ಸಂಚಾರ ಅರಂಭವಾಗಿರುವುದರಿಂದ ಆಲಂಕಾರಿನಿಂದ ಸವಣೂರಿಗೆ ಕೇವಲ 9.00 ರೂ.ನಲ್ಲಿ ಪ್ರಯಾಣಿಸಬಹುದಾಗಿದೆ.

Also Read  The Impact of Technology and Communication

ಧರ್ಮಸ್ಥಳ ಘಟಕದ ಸರಕಾರಿ ಬಸ್ ನೆಲ್ಯಾಡಿ, ಬಲ್ಯ ಮೂಲಕ ಕಡಬಕ್ಕೆ ಅಗಮಿಸಿ ಆಲಂಕಾರು, ಶಾಂತಿಮೊಗರು, ಸವಣೂರು ಮೂಲಕ ಪುತ್ತೂರಿಗೆ ತೆರಳಲಿದೆ. ದಿನಂಪ್ರತಿ ಮೂರು ಅವಧಿಯಲ್ಲಿ ಸಂಚರಿಸಲಿದೆ.

error: Content is protected !!
Scroll to Top