ಕೃಷಿ, ನೀರಾವರಿಗೆ ಸರ್ಕಾರ ಆದ್ಯತೆ ➤ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.16. 15- 12 ನೇ ಶತಮಾನದಲ್ಲೇ ಕೃಷಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೆರೆ ಕಟ್ಟೆಗಳ ನಿರ್ಮಾಣಕ್ಕೆ ಶ್ರೀ ಗುರು ಸಿದ್ದರಾಮೇಶ್ವರರು ಹೆಚ್ಚು ಒತ್ತು ನೀಡಿದ್ದರು. ಇದೇ ಹಾದಿಯಲ್ಲಿ ನಡೆದಿರುವ ನಮ್ಮ ಸರ್ಕಾರ ಕೃಷಿ ಮತ್ತು ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿ ಮುನ್ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಿಪಟೂರು ನಗರದ ಶ್ರೀ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನೊಳಂಬ ಲಿಂಗಾಯತ ಸಂಘ ಆಯೋಜಿಸಿದ್ದ ಶ್ರೀ ಗುರುಸಿದ್ದಾರಾಮೇಶ್ವರರ 850 ನೇ ಜಯಂತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾಯಕದ ಮುಖಾಂತರ ಬದುಕಿನ ಶ್ರೇಷ್ಠತೆಯನ್ನು ಪಡೆದುಕೊಳ್ಳಬೇಕು ಎಂಬುದು ಸಿದ್ದರಾಮೇಶ್ವರರ ಚಿಂತನೆ. ವಿಚಾರದಲ್ಲಿ ಆಚಾರದಲ್ಲಿ ಸಾಮ್ಯತೆ ಇದ್ದಿದ್ದರಿಂದ ಸಿದ್ದರಾಮರು ಸಹ ಬಸವೇಶ್ವರರ ಪ್ರಭಾವಕ್ಕೆ ಒಳಗಾಗಿದ್ದರು. ಬಸವ,ಸಿದ್ದರಾಮರಾದಿ ಶರಣರು ಕಾಯಕವನ್ನು ಪೂಜೆಗಿಂತ ಒಂದು ಕೈ ಹೆಚ್ಚು ಎಂಬಂತೆ ಸ್ವರ್ಗಕ್ಕೆ ಹೋಲಿಸುವ ಮೂಲಕ ಕಾಯಕವೇ ಕೈಲಾಸ ಎಂದು ಸಾರಿದರು ಎಂದು ಮುಖ್ಯಮಂತ್ರಿಗಳು ಹೇಳಿದರು.

Also Read  ಬೈಕ್ ಅಪಘಾತ: ಸವಾರ ಮೃತ್ಯು..!

 

error: Content is protected !!