‘ನಾ’ ನಾಯಕಿ ಸಮಾವೇಶ ➤ಬೆಂಗಳೂರಿಗೆ ಇಂದು ಪ್ರಿಯಾಂಕಾ ಗಾಂಧಿ ಆಗಮನ!

ನ್ಯೂಸ್ ಕಡಬ) newskadaba.com, ಬೆಂಗಳೂರು,ಜ. 16. ಬೆಂಗಳೂರಿನ ಅರಮನೆ ಮೈದಾನದ ಮುಖ್ಯದ್ವಾರದ ಬಳಿ ಇಂದು ಕಾಂಗ್ರೆಸ್​​ನಿಂದ ‘ನಾ ನಾಯಕಿ’ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಕಾಂಗ್ರೆಸ್​​​ ನಾಯಕಿ ಪ್ರಿಯಾಂಕಾ ಗಾಂಧಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಕೆಂಪೇಗೌಡ ಏರ್​​ಪೋರ್ಟ್​​ಗೆ ಪ್ರಿಯಾಂಕಾ ಆಗಮಿಸಲಿದ್ದು, ಮಧ್ಯಾಹ್ನ 1.30ಕ್ಕೆ ಸಮಾವೇಶದ ವೇದಿಕೆಗೆ ಆಗಮಿಸಲಿದ್ದಾರೆ.

ಮಧ್ಯಾಹ್ನ 3.30ರವರೆಗೂ ಸಮಾವೇಶದಲ್ಲಿ ಇರಲಿದ್ದಾರೆ. ವೇದಿಕೆ ಮೇಲೆ ಕೇವಲ ಮಹಿಳಾ ನಾಯಕಿಯರಿಗೆ ಮಾತ್ರ ಅವಕಾಶ ನೀಡಲಾಗಿದ್ದು ಕಾಂಗ್ರೆಸ್​ನ ‘ನಾ ನಾಯಕಿ’ ಸಮಾವೇಶದಲ್ಲಿ ಮಹತ್ವದ ಘೋಷಣೆಯಾಗುವ ಸಾಧ್ಯತೆ ಇದೆ. ಹಾಗೂ ಕಾಂಗ್ರೆಸ್ ಈ ಸಮಾವೇಶದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲಿದೆ.

Also Read  ಕಡಬ ತಾಲೂಕಿನ ಪ್ರಸಿದ್ದ ನಾಟಿವೈದ್ಯೆ ರಾಮಕ್ಕ ಇನ್ನಿಲ್ಲ

error: Content is protected !!
Scroll to Top