ಉಡುಪಿ: ಅಡಿಕೆ ಕೀಳುವ ಸಮಯದಲ್ಲಿ ಮುರಿದು ಬಿದ್ದ ಮರ…!! ➤ ವ್ಯಕ್ತಿಯೋರ್ವ ಮೃತ್ಯು

(ನ್ಯೂಸ್ ಕಡಬ)newskadaba.com  ಉಡುಪಿ, ಜ..16. ಅಡಿಕೆ ಕೀಳುತ್ತಿದ್ದ ವ್ಯಕ್ತಿಯೊಬ್ಬರು ಮರ ಮುರಿದು ನೆಲಕ್ಕೆ ಬಿದ್ದು ಮೃತಪಟ್ಟ ಘಟನೆ ಉಡುಪಿಯಲ್ಲಿ ವರದಿಯಾಗಿದೆ.

ನಗರದ ಬಸ್ ನಿಲ್ದಾಣದ ಸಮೀಪದ ಮತ್ತದಬೆಟ್ಟು ನಿವಾಸಿ ಶ್ಯಾಮ್ ಅಂಚನ್ (59) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಶ್ಯಾಮ್ ಅವರು ಮರದಿಂದ ಅಡಿಕೆ ಕೀಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬಳಿಕ ಮೃತಪಟ್ಟರು. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಇವರು ಪರ್ಕಳದಲ್ಲಿ ಪಾಲುದಾರಿಕೆಯಲ್ಲಿ ಬೇಕರಿ ನಡೆಸುತ್ತಿದ್ದರು ಎನ್ನಲಾಗಿದೆ.

Also Read  ಅಂಚೆ ಕಛೇರಿ ಕಳ್ಳತನ ಪ್ರಕರಣ- ಆರೋಪಿ ಅರೆಸ್ಟ್..!

 

error: Content is protected !!
Scroll to Top