ಮಂಗಳೂರು: ವಿಮಾನ ಪ್ರಯಾಣಿಕರಿಗೆ ಶಾಕ್ ..!! ➤ ಎಪ್ರಿಲ್ ತಿಂಗಳಿನಿಂದ ಪಾವತಿಸಬೇಕು ಹೆಚ್ಚುವರಿ ಶುಲ್ಕ

(ನ್ಯೂಸ್ ಕಡಬ)newskadaba.com ಮಂಗಳೂರು, ಜ.15. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವವರು ಎಪ್ರಿಲ್‌ ತಿಂಗಳಿನಿಂದ ಹೆಚ್ಚಿನ ಬೆಲೆ ತೆರಬೇಕಾಗಿದೆ.  ಮಾರ್ಚ್‌ 2026ರ ತನಕ ಅದಾನಿ ಏರ್‌ಪೋರ್ಟ್ಸ್‌ ಒಡೆತನದ ಈ ವಿಮಾನ ನಿಲ್ದಾಣದಲ್ಲಿ ಯೂಸರ್‌ ಡೆವಲೆಪ್ಮೆಂಟ್‌ ಫೀ (ಯುಡಿಎಫ್)‌ ಅಥವಾ ಬಳಕೆದಾರರ ಶುಲ್ಕವನ್ನು ಏರಿಸಲು ನಿರ್ಣಯಿಸಲಾಗಿದೆ. ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರವು ಈ ನಿಟ್ಟಿನಲ್ಲಿ ಅನುಮತಿಯನ್ನು ನೀಡಿದೆ ಎಂದು ವರದಿ ಮಾಡಿದೆ.


ಮಂಗಳೂರು ವಿಮಾನ ನಿಲ್ದಾಣದಲ್ಲಿ ಇದೀಗ ಇರುವ ನಿಯಮದ ಪ್ರಕಾರ ಯುಡಿಎಫ್‌ ಅನ್ನು ನಿರ್ಗಮನ ಪ್ರಯಾಣಿಕರು ಮಾತ್ರ ಪಾವತಿಸುತ್ತಿದ್ದಾರೆ. ಆದರೆ ಫೆಬ್ರವರಿಯಿಂದ ಆಗಮನ ಪ್ರಯಾಣಿಕರು ಕೂಡ ಈ ಶುಲ್ಕ ಕಡ್ಡಾಯವಾಗಲಿದೆ. ಪ್ರಸ್ತುತ ದೇಶೀಯ ಪ್ರಯಾಣಿಕರಿಗೆ ವಿಧಿಸಲಾಗುವ ಶುಲ್ಕ ರೂ. 150 ಆಗಿದ್ದರೆ ಅಂತಾರಾಷ್ಟ್ರೀಯ ಪ್ರಯಾಣಿಕರು ರೂ. 825 ಪಾವತಿಸಬೇಕಿದೆ.

Also Read  ಬಿಜೆಪಿಯವರು 25 ವರ್ಷಗಳ ಅಭಿವೃದ್ಧಿಯ ಶ್ವೇತಪತ್ರ ಹೊರಡಿಸಲಿ ► ಸುಳ್ಯ ಶಾಸಕರಿಗೆ ಕಾಂಗ್ರೆಸ್ ಉಸ್ತುವಾರಿ ಸವಿತಾ ರಮೇಶ್ ಸವಾಲು

error: Content is protected !!
Scroll to Top