ಮಂಗಳೂರು: ಸಿವಿಲ್ ನ್ಯಾಯಾಧೀಶರ ಪರೀಕ್ಷೆ..! ➤  ಯುವ ನ್ಯಾಯವಾದಿ ರಾಹುಲ್ ಶೆಟ್ಟಿಗಾರ್ ರಾಜ್ಯಕ್ಕೆ ಫಸ್ಟ್

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.15. ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಮಂಗಳೂರಿನ ಯುವ ನ್ಯಾಯವಾದಿ ರಾಹುಲ್ ಶೆಟ್ಟಿಗಾರ್ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿರುವ ಅವರು, ರಾಜ್ಯದಲ್ಲೇ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿದ್ದಾರೆ. ಮೂಲತಃ ಉಡುಪಿ ಪರ್ಕಳದವರಾದ ರಾಹುಲ್, ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಸರ್ವೋದಯ ಶೆಟ್ಟಿಗಾರ್ ಮತ್ತು ರೈಲ್ವೇ ಇಲಾಖೆಯ ನಿವೃತ್ತ ಉದ್ಯೋಗಿ ಲೀಲಾವತಿಯವರ ಪುತ್ರ. ಮಂಗಳೂರಿನ ಖ್ಯಾತ ನ್ಯಾಯವಾದಿ ಪಿ.ಪಿ. ಹೆಗ್ಡೆಅವರ ಬಳಿ ಕಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.

ಪಿ.ಪಿ. ಹೆಗ್ಡೆ ಅವರ ಅಡಿಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಅತ್ಯುತ್ತಮ ಅನುಭವವಾಗಿದೆ. ನನ್ನ ಯಶಸ್ಸಿನ ಗರಿಷ್ಠ ಪಾಲು ಅವರಿಗೆ ಸಲ್ಲುತ್ತದೆ ಎಂದು ರಾಹುಲ್ ಹೇಳಿದ್ದಾರೆ. ನಾನು ಮೊದಲ ರ್‍ಯಾಂಕ್‌ನ್ನು ನಿರೀಕ್ಷಿಸಿರಲಿಲ್ಲ. ಆದರೆ ಫಲಿತಾಂಶದ ವೇಳೆ ಮೊದಲ ರ್‍ಯಾಂಕ್ ಬಂದಿರುವುದು ನೋಡಿ ಆಶ್ಚರ್ಯ ಮತ್ತು ಖುಷಿ ಎರಡೂ ಆಯಿತು ಎನ್ನುತ್ತಾರೆ ರಾಹುಲ್.

Also Read  ಗ್ಯಾಸ್ ಗೀಸರ್ ನ ರಾಸಾಯನಿಕ ಲೀಕ್ !! ಯುವಕನೋರ್ವ ಮೃತ್ಯು

 

error: Content is protected !!
Scroll to Top