(ನ್ಯೂಸ್ ಕಡಬ) newskadaba.com ಕಡಬ, ಡಿ.16. ಭಾರತ್ ಕರ್ನಾಟಕ ಸ್ಪೆಷಲ್ ಒಲಿಂಪಿಕ್ಸ್ ವತಿಯಿಂದ ಮಣಿಪಾಲದ ವಿ.ವಿ ಆವರಣದಲ್ಲಿ ಇತ್ತೀಚೆಗೆ ನಡೆದ ವಿಶೇಷಚೇತನರ ರಾಜ್ಯ ಕ್ರೀಡಾ ತಂಡಗಳ ಮುಖ್ಯ ತರಬೇತುದಾರರಾಗಿ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಗೆಲುವಿಗೆ ಕಾರಣರಾದ ತರಬೇತುದಾರರನ್ನು ಗೌರವಿಸಲಾಯಿತು.
ರಾಜ್ಯ ಕ್ರೀಡಾ ಸಚಿವರಾದ ಪ್ರಮೋದ್ ಮಧ್ವರಾಜ್ ಬೆಥನಿ ವಿಶೇಷ ಶಾಲಾ ತರಬೇತುದಾರ ಹಾಗೂ ಶ್ರೀದುರ್ಗಾಂಬಾ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಜೆ.ಸಿ. ಪ್ರಭಾಕರ್ ಮರ್ಕಂಜ ರವರನ್ನು ಸನ್ಮಾನಿಸಿ ಗೌರವಿಸಿ ಶುಭಹಾರೈಸಿದರು. ಇವರು ಭಾರತ ದೇಶದ ಹಲವು ರಾಜ್ಯಗಳಾದ ತಮಿಳುನಾಡು, ಗೋವಾ, ಬೆಂಗಳೂರು, ಗುಜರಾತ್, ಹಿಮಾಚಲಪ್ರದೇಶ, ದೆಹಲಿ, ಅಸ್ಸಾಂ, ಚೆನ್ನೈ, ಮುಂಬೈ, ಉತ್ತರಪ್ರದೇಶ, ಹೈದರಾಬಾದ್ ಮುಂತಾದ ಕಡೆ ವಿವಿಧ ಕ್ರೀಡೆಗಳಾದ ಶಟಲ್ ಬ್ಯಾಡ್ಮಿಂಟನ್ ಕ್ರೀಡೆ, ಫುಟ್ಬಾಲ್, ವಾಲಿಬಾಲ್, ಬಾಸ್ಕೇಟ್ಬಾಲ್, ಹಾಕಿ, ಹ್ಯಾಂಡ್ಬಾಲ್, ಮುಂತಾದ ಕ್ರೀಡೆಗಳಲ್ಲಿ ಕರ್ನಾಟಕ ತಂಡದ ತರಬೇತುದಾರರಾಗಿ ತಂಡದ ವಿಜಯಕ್ಕೆ ಕಾರಣರಾಗಿರುತ್ತಾರೆ.

ಅಲ್ಲದೆ ಈ ಹಿಂದೆ ಬೆಥನಿ ಮರ್ದಾಳದ ಕು|ರೆಬೆಕಾ ಮತ್ತು ರಾಜ್ಯದ 4 ಕ್ರೀಡಾಳುಗಳ ಅಮೇರಿಕಾದ ಲಾಸ್ ಏಂಜಲೀಸ್ನಲ್ಲಿ ನಡೆದ ವಿಶ್ವ ಒಲಿಂಪಿಕ್ಸ್‌ನಲ್ಲಿ ಪದಕ ಪಡೆಯಲು ರಾಜ್ಯ ತರಬೇತುದಾರರಾಗಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಕ್ರೀಡಾ ಪ್ರೋತ್ಸಾಹಕ ಧನ ಸಹಾಯವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
