(ನ್ಯೂಸ್ ಕಡಬ)newskadaba.com ಸೌದಿ ಅರೇಬಿಯಾ, ಜ.15. ಅವಳಿ ಮಕ್ಕಳನ್ನು ಬೇರ್ಪಡಿಸಲು ಬರೊಬ್ಬರಿ 27 ಮಂದಿ ವೈದ್ಯರ ತಂಡ ಸರ್ಜರಿ ನಡೆಸಿದೆ ಎಂದು ವರದಿಯಾಗಿದೆ. ಸೌದಿ ಅರೇಬಿಯಾದ ರಾಜ ಸಾಲ್ಮನ್ ಅವರ ಆದೇಶದ ಮೇರೆಗೆ ಕಿಂಗ್ ಅಬ್ದುಲ್ಲಾ ವಿಶೇಷ ಆಸ್ಪತ್ರೆಯಲ್ಲಿ ಸುಮಾರು 11 ಗಂಟೆಗಳ ಕಾಲ ವಿಶೇಷ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ಅವಳಿ ಮಕ್ಕಳ ಲಿವರ್ ಮತ್ತು ಹೊಟ್ಟೆ ಅಂಟಿಕೊಂಡಿತ್ತು. ಹೀಗಾಗಿ ಅವಳಿಗಳನ್ನು ಪ್ರತ್ಯೇಕಿಸಲು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದೀಗ ಇಬ್ಬರು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. ವೈದ್ಯರ ಜೊತೆಗೆ ನರ್ಸ್‌ಗಳು, ತಾಂತ್ರಿಕ ವಿಭಾಗ ಸೇರಿ, ಹಲವರು ಹೆಚ್ಚುವರಿಯಾಗಿ ಭಾಗಿಯಾಗಿದ್ದಾರೆ. ಶಸ್ತ್ರಚಿಕಿತ್ಸೆ ಸಂಪೂರ್ಣವಾಗಿ ಮುಗಿದಿಲ್ಲ. ಇನ್ನೂ ಕೆಲವು ಅಂಗಗಳ ಶಸ್ತಚಿಕಿತ್ಸೆ ನಡೆಯಲಿದೆ ಎಂದು ವೈದ್ಯರು ಹೇಳಿದ್ದಾರೆ.