ರಾಮಕುಂಜ: ವಿದ್ಯಾರ್ಥಿಗಳು ದೇಶದ ಗೌರವ ಹೆಚ್ಚಿಸುವ ಕೆಲಸ ಮಾಡಿ  ➤ ಚಕ್ರವರ್ತಿ ಸೂಲಿಬೆಲೆ ಕಿವಿಮಾತು..!

(ನ್ಯೂಸ್ ಕಡಬ) newskadaba.com  ಮಂಗಳೂರು, ಜ.14. ಬಾವಿಯೊಳಗಿನ ಕಪ್ಪೆಯಂತೆ ಇರುವ ಬದಲು ವಿದ್ಯಾರ್ಥಿಗಳು ತಮ್ಮ ಮನಸ್ಸು, ಚಿಂತನೆಯನ್ನು ವಿಸ್ತಾರ ಮಾಡಿಕೊಳ್ಳಿ. ಇವತ್ತಿನ ಭಾರತಕ್ಕೆ ಜಗತ್ತನ್ನು ಗೆಲ್ಲುವಂತಹ ತರುಣ ಶಕ್ತಿ ಬೇಕಿದೆ. ಆದ್ದರಿಂದ ಸ್ವಾಮಿ ವಿವೇಕಾನಂದ, ಆಜಾದ್, ಸುಭಾಶ್ ಚಂದ್ರ ಬೋಸ್, ಝಾನ್ಸಿರಾಣಿ ಲಕ್ಷ್ಮೀಬಾಯಿಯಂತ ದಿಟ್ಟ ಹೋರಾಟಗಾರರನ್ನೂ ಆದರ್ಶವಾಗಿಟ್ಟುಕೊಂಡು ಬದುಕು ರೂಪಿಸಿಕೊಳ್ಳಿ. ಇದರೊಂದಿಗೆ ದೇಶದ ಗೌರವ ಹೆಚ್ಚಿಸುವ ಕೆಲಸ ಮಾಡಿ ಅಂತಾ ಚಿಂತಕ ಹಾಗೂ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.


ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಆಶ್ರಯದಲ್ಲಿ ಶ್ರೀ ರಾಮಕುಂಜೇಶ್ವರದ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ‘ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ’ ಕುರಿತು ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡಿದರು. ದೇಶಕ್ಕಾಗಿ ಇಂದು ಹೊಸತನದ ಕಡೆಗೆ ತಮ್ಮನ್ನು ತಾವು ತೆರೆದುಕೊಳ್ಳುವಂತಹ ತರುಣ ಶಕ್ತಿಯ ಅಗತ್ಯವಿದೆ. ಜಗತ್ತಿನ ಸಣ್ಣಪುಟ್ಟ ದೇಶಗಳೂ ಭಾರತದ ಮೇಲೆ ನಿರಂತರ ದಾಳಿ ನಡೆಸಿದರೂ ಇಲ್ಲಿಯ ತನಕ ಭಾರತವನ್ನು ಧ್ವಂಸಗೊಳಿಸಲು ಸಾಧ್ಯವಾಗಿಲ್ಲ ಎಂದರು.

Also Read  ಅಕ್ರಮ ಸಂಬಂಧ ಹಿನ್ನೆಲೆ ಪ್ರಕರಣ..!   ಆಟೋ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ..!

 

 

error: Content is protected !!
Scroll to Top