➤ಒಡಿಶಾ ಮಹಿಳಾ ಕ್ರಿಕೆಟರ್ ಶವ ಕಾಡಿನಲ್ಲಿ ಪತ್ತೆ..!

(ನ್ಯೂಸ್ ಕಡಬ) newskadaba.com, ಒಡಿಶಾ, ಜ. 14. ಒಡಿಶಾದ ಮಹಿಳಾ ಕ್ರಿಕೆಟರ್ ರಾಜಶ್ರೀ ಸ್ವೈನ್  ರವರ ಶವ ಶುಕ್ರವಾರ ಕಟಕ್ ಹೊರವಲಯದ ದಟ್ಟ ಅರಣ್ಯದಲ್ಲಿ ಪತ್ತೆಯಾಗಿದೆ. ಜನವರಿ 11 ರಿಂದ ರಾಜಶ್ರೀ ನಾಪತ್ತೆಯಾಗಿದ್ದರು. ಅಥಗಢ ಪ್ರದೇಶದ ಗುರುಡಿಜಾಟಿಯಾ ಅರಣ್ಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಕಟಕ್ ಪೊಲೀಸ್ ಉಪ ಆಯುಕ್ತ ಪಿನಾಕ್ ಮಿಶ್ರಾ ತಿಳಿಸಿದ್ದಾರೆ.

ರಾಜಶ್ರೀ ಸಾವಿನ ಬಗ್ಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಆದರೆ ಆಕೆಯ ದೇಹದ ಮೇಲಿನ ಗಾಯದ ಗುರುತುಗಳು ಕಂಡು ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಕಾಸರಗೋಡು: ಒಂದೇ ದಿನ ಎರಡು ಮನೆಗೆ ಕನ್ನ ➤ 40 ಪವನ್ ಚಿನ್ನಾಭರಣ ಸಹಿತ ನಗದು ಕಳವು.!

error: Content is protected !!
Scroll to Top