ಕಾಸರಗೋಡು: ಒಂದೇ ದಿನ ಎರಡು ಮನೆಗೆ ಕನ್ನ ➤ 40 ಪವನ್ ಚಿನ್ನಾಭರಣ ಸಹಿತ ನಗದು ಕಳವು.!

Theft, crime, Robbery

(ನ್ಯೂಸ್ ಕಡಬ) newskadaba.com  ಕಾಸರಗೋಡು, ಜ.14. ಎರಡು ಮನೆಗಳಿಗೆ ನುಗ್ಗಿದ ಕಳ್ಳರು ಸುಮಾರು 40 ಪವನ್ ಚಿನ್ನಾಭರಣ ಮತ್ತು 40 ಸಾವಿರ ರೂ. ನಗದು ಕಳವು ಗೈದ ಘಟನೆ ಕುಂಬಳೆ ಸಮೀಪದ ನಾಯ್ಕಾಪು ವಿನಲ್ಲಿ ನಡೆದಿದೆ.

ಬ್ಯಾಂಕ್ ಸಿಬ್ಬಂದಿ ವಾಸುದೇವ ರಾವ್ ಮನೆಗೆ ನುಗ್ಗಿ 35 ಪವನ್ ಚಿನ್ನಾಭರಣ ಮತ್ತು 15 ಸಾವಿರ ರೂ. ನಗದು ಹಾಗೂ ಮೋಹನ್ ದಾಸ್ ಎಂಬವರ ಮನೆಯಿಂದ ಮೂರೂವರೆ ಪವನ್ ಚಿನ್ನಾಭರಣ ಮತ್ತು 25 ಸಾವಿರ ರೂ. ನಗದು ಕಳವು ಮಾಡಲಾಗಿದೆ.

Also Read  ಮಂಗಳೂರು ಮ.ಪಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉದ್ದಿಮೆದಾರರ ಗಮನಕ್ಕೆ➤ಆ.10ರೊಳಗೆಉದ್ದಿಮೆ ಪರವಾನಗಿ ನವೀಕರಿಸದಿದ್ದಲ್ಲಿ ಉದ್ದಿಮೆರದ್ದು

ವಾಸುದೇವ ರವರ ಮನೆಯ ಕಿಟಿಕಿಯ ಸರಳು ಮುರಿದು ಒಳನುಗ್ಗಿ ಕೃತ್ಯ ನಡೆಸಲಾಗಿದೆ ಮೋಹನ್ ದಾಸ್ ರವರ ಮನೆಯ ಮುಂಭಾಗಿಲ ಬಾಗಿಲು ಮುರಿದು ಮುರಿದು ಕಳವು ಮಾಡಲಾಗಿದೆ. ಕುಂಬಳೆ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ.

 

 

error: Content is protected !!
Scroll to Top