ಕೌಟುಂಬಿಕ ಕಲಹ ಹಿನ್ನೆಲೆ ತಾಯಿ ಆತ್ಮಹತ್ಯೆ   ➤ ನೊಂದ ಮಗ ನೇಣಿಗೆ ಶರಣು..!

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜ.14. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ- ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ನಡೆದಿದೆ. ಕುಮಾರಸ್ವಾಮಿ ಲೇಔಟ್‌ನ ವಿಜಯಲಕ್ಷ್ಮಿ (50) ಹಾಗೂ ಅವರ ಪುತ್ರ ಹರ್ಷ (25) ಎಂದು ಗುರುತಿಸಲಾಗಿದೆ. ತಾಯಿ ವಿಜಯಲಕ್ಷ್ಮಿ ಜೊತೆ ಊಟದ ವಿಚಾರಕ್ಕೆ ಮಗ ಹರ್ಷ ರಾತ್ರಿ ಜಗಳವಾಡಿದ್ದ. ಮಗನ ಮಾತಿನಿಂದ ಮನನೊಂದ ವಿಜಯಲಕ್ಷ್ಮಿ ಮನೆಯ ಬಳಿ ಸಂಪಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.


ಬಳಿಕ ವಿಜಯಲಕ್ಷ್ಮಿ ಅವರನ್ನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ತಾಯಿ ಮೃತಪಟ್ಟ ವಿಚಾರ ತಿಳಿದು ತೀವ್ರವಾಗಿ ಮನನೊಂದ ಹರ್ಷ ನಾನೇ ತಾಯಿಯ ಸಾವಿಗೆ ಕಾರಣನಾದೆ ಎಂದು ಭಾವಿಸಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸುರತ್ಕಲ್: ಗುಡ್ಡ ಕುಸಿತ…!!   ➤  ಓರ್ವ ಮೃತ್ಯು, ಇನ್ನೋರ್ವನಿಗೆ ಗಂಭೀರ ಗಾಯ

 

 

error: Content is protected !!
Scroll to Top