ದಿನಕ್ಕೊಂದು ರಾಜ್ಯ, ಗಂಟೆಗೊಂದು ಸಿಮ್ ➤ ಸ್ಯಾಂಟ್ರೋ ರವಿ ಬಂಧನ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ..!

(ನ್ಯೂಸ್ ಕಡಬ) newskadaba.com ಮೈಸೂರು, ಜ.14. ಅನೈತಿಕ ದಂಧೆಗಳ ಆರೋಪಿ ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಗುಜರಾತ್‌ನ ಅಹಮ್ಮದಾಬಾದ್ ಸಮೀಪ ಬಂಧಿಸಲಾಗಿದೆ. ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ರವಿ ಎರಡನೇ ಪತ್ನಿ ನೀಡಿದ್ದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಮೈಸೂರು ಪೊಲೀಸರು ಚಾಲಾಕಿಯನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಸ್ಯಾಂಟ್ರೋ ರವಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸ್ಯಾಂಟ್ರೋ ರವಿ ತಲೆಮರೆಸಿಕೊಳ್ಳಲು ವಿಗ್ ಕಳಚಿದ್ದ. ಶೇವ್ ಮಾಡಿಕೊಂಡ ಇಂದು ಬೆಳಗ್ಗೆ ಮಹಾರಾಷ್ಟ್ರದಿಂದ ಗುಜರಾತ್ ಪ್ರವೇಶ ಮಾಡಿದ್ದ. ಈ ಕುರಿತು ಸುಳಿವು ಪಡೆದ ಮೈಸೂರು ಪೊಲೀಸರು, ಗುಜರಾತ್ ಪೊಲೀಸರ ನೆರವು ಪಡೆದು ಸ್ಯಾಂಟ್ರೋ ರವಿಯನ್ನು ಬಂಧಿಸಿದ್ದಾರೆ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

ಸ್ಯಾಂಟ್ರೋ ರವಿ ತಲೆಮರೆಸಿಕೊಳ್ಳಲು ದಿನಕ್ಕೊಂದು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ. ಎಲ್ಲಿಯೂ ಯಾವುದೇ ಅನುಮಾನ ಬರದಂತೆ ನೋಡಿಕೊಳ್ಳುತ್ತಿದ್ದ. ತನ್ನ ಕಾರಿನ ಜಾಡು ಹಿಡಿದು ಬಂಧಿಸುವ ಸಾಧ್ಯತೆ ಅರಿತಿದ್ದ ಕಾರಣ ಸ್ಯಾಂಟ್ರೋ ರವಿ ಕಾರು ಬದಲಿಸುತ್ತಿದ್ದ. ಇಷ್ಟೇ ಅಲ್ಲ ಪ್ರತಿ ದಿನ ಒಂದೊಂದು ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದ. ಹೀಗಾಗಿ ಸ್ಯಾಂಟ್ರೋ ರವಿಯನ್ನು ಕರೆ ಮೂಲಕ, ಸ್ಯಾಟಲೈಟ್ ಲೋಕೇಶನ್ ಟ್ರೇಸ್ ಮಾಡುವುದು ಕೂಡ ಪೊಲೀಸರಿಗೆ ಸವಾಲಾಗಿತ್ತು. ಇಷ್ಟು ಮಾತ್ರವಲ್ಲ, ದಿನಕ್ಕೊಂದು ರಾಜ್ಯಕ್ಕೆ ತೆರಳುತ್ತಿದ್ದ. ಹೀಗಾಗಿ ಪೊಲೀಸರು ಒಂದು ರಾಜ್ಯದಲ್ಲಿ ಸುಳಿವು ಹಿಡಿದು ಆ ರಾಜ್ಯಕ್ಕೆ ತೆರಳಿದಾಗ ನಿರಾಸೆಯಾಗುತ್ತಿತ್ತು. ಸ್ಯಾಂಟ್ರೋ ರವಿಗೆ ಹೇಗೆ ಪರಾರಿಯಾಗಬೇಕು ಅನ್ನೋದು ಗೊತ್ತಿತ್ತು ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

 

error: Content is protected !!

Join the Group

Join WhatsApp Group