➤ಇಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ಯುವತಿ ಕುಸಿದು ಬಿದ್ದು ಮೃತ್ಯು..!

(ನ್ಯೂಸ್ ಕಡಬ) newskadaba.com, ಮಲಪ್ಬುರಂ, ಜ. 14. ಮಲಪ್ಬುರಂ ಮದುವೆಯ ಮುನ್ನಾ ದಿನ 19 ವರ್ಷದ ಯುವತಿಯೊಬ್ಬಳು ಕುಸಿದು ಬಿದ್ದು ಮೃತ ಪಟ್ಟಿರುವ ಘಟನೆ ಕೇರಳದ ಮಲಪ್ಬುರಂನ ಪೆರಿಂಥಲಮನ್ನಾದಲ್ಲಿ ನಡೆದಿದೆ. ಮೃತಳನ್ನು ಫಾತಿಮಾ ಬಥೂರ್ ಎಂದು ಗುರುತಿಸಲಾಗಿದೆ.

ಈಕೆಯ ಮದುವೆ ಇಂದು ಮೂರ್ಕ್ಕನಾಡು ಮೂಲದ ಯುವಕನೊಂದಿಗೆ ನಡೆಯಬೇಕಿತ್ತು. ಆದರೆ ಜ.13ರ ರಾತ್ರಿ ಕುಸಿದು ಬಿದ್ದು ಯುವತಿ ಮೃತಪಟ್ಟಿದ್ದಾಳೆ. ಮದುವೆ ಹಿಂದಿನ ದಿನ ನಡೆಯುವ ಸಮಾರಂಭದಲ್ಲಿ ಫೋಟೋ ತೆಗೆಯುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಮಗಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

Also Read  ಪತನದ ಅಂಚಿನಲ್ಲಿ ಖಾಸಗಿ ಬಸ್ ಸೇವಾ ವ್ಯವಸ್ಥೆ - ದ.ಕ. ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ ಆತಂಕ

error: Content is protected !!
Scroll to Top