ಲಾಡ್ಜ್ ವೊಂದರಲ್ಲಿ ಪ್ರೇಯಸಿಯಿಂದಲೇ ಪ್ರಿಯಕರನ ಹತ್ಯೆ..!   

(ನ್ಯೂಸ್ ಕಡಬ) newskadaba.com  ಶಿವಮೊಗ್ಗ, ಜ.14. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಹೆರಿಟೇಜ್ ಲಾಡ್ಜ್ ನಲ್ಲಿ ಪ್ರೇಯಸಿಯಿಂದಲೇ  ಪ್ರಿಯಕರನ ಹತ್ಯೆಯಾಗಿರುವ ಭೀಕರ ಘಟನೆ ನಡೆದಿದೆ. ಹಾಸನ ಮೂಲದ ಪರ್ವೇಜ್ ಖಾನ್​ ಎಂಬ ವ್ಯಕ್ತಿಯ ಕೊಲೆಯಾಗಿದೆ. ಪ್ರೇಯಸಿಯೇ ಈ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗುತ್ತಿದ್ದು ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಹಾಸನದ ಚನ್ನರಾಯಪಟ್ಟಣದ ಮೂಲದ ಆಯಿಷಾ ಮತ್ತು ಜಾವಗಲ್​ ಮೂಲದ ಪರ್ವೇಜ್ ಖಾನ್ ಇಬ್ಬರು ಕಳೆದ ಮೂರು ನಾಲ್ಕು ವರ್ಷಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇವರಿಬ್ಬರ ಸಂಬಂಧದ ವಿಚಾರಕ್ಕೆ ಮನನೊಂದಿದ್ದ ಆಯಿಷಾಳ ಪತಿ ಇವಳನ್ನು ಬಿಟ್ಟು ದೂರ ಉಳಿದಿದ್ದ ಎನ್ನಲಾಗುತ್ತಿದೆ.

Also Read  ಹಳಸಿದ ಅನ್ನ ತಿಂದು ಬಾಲಕ ಮೃತ್ಯು

 

error: Content is protected !!
Scroll to Top