(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.14. ವಿದ್ಯಾರ್ಥಿಗಳೆಲ್ಲರೂ ಕಾದಿರುವ ದ್ವಿತೀಯ ಪಿಯುಸಿ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ಆದರೆ ಅದಕ್ಕೂ ಮುನ್ನಾ ಪೂರ್ವ ಸಿದ್ದತಾ ಪರೀಕ್ಷೆ ನಡೆಸಲಾಗುತ್ತದೆ. ಅದರ ವೇಳಾಪಟ್ಟಿ ಕೂಡ ಸದ್ಯ ಬಿಡುಗಡೆಯಾಗಿದೆ. ಇದನ್ನು ಗಮನಿಸಿ ವಿದ್ಯಾರ್ಥಿಗಳುಉ ಸಿದ್ದತೆಯಲ್ಲಿ ತೊಡಗಿಕೊಂಡರೆ ಉತ್ತಮ ಫಲಿತಾಂಶ ದೊರಕುವಂತಾಗುತ್ತದೆ. ಪರೀಕ್ಷೆ ದಿನಾಂಕ ಮತ್ತು ವಿಷಯಗಳ ವಿವರಗಳನ್ನು ನೀಡಲಾಗಿದ್ದು, ಅದಕ್ಕನುಗುಣವಾಗಿ ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ.
2022-23 ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ರಾಜ್ಯದ್ಯಾಂತ ಏಕಾಕಾಲದಲ್ಲಿ ನಡೆಸಲಾಗುತ್ತದೆ. 06-02-2023 ರಿಂದ 28-02-2023ರವರೆಗೆ ನಡೆಯಲಿದೆ ಎನ್ನಲಾಗಿದೆ. ಯಾವುದೇ ನಿಖರವಾದ ದಿನಾಂಕ ಮತ್ತು ವೇಳಾಪಟ್ಟಿ ಇಲ್ಲದೆ ಇರುವ ಕಾರಣ ಆಯಾ ಜಿಲ್ಲೆಗಳಲ್ಲಿ ಯಾವಾಗ ಪೂರ್ವ ಸಿದ್ದತಾ ಪರೀಕ್ಷೆ ಮಾಡಲು ನಿರ್ಧರಿಸಿದ್ದಾರೆ ಎಂಬುವುದು ಮುಖ್ಯ.