ವಿಟ್ಲ: ಅನ್ಯಕೋಮಿನ ವಿದ್ಯಾರ್ಥಿನಿ ಜೊತೆ ಮಾತನಾಡಿದ್ದಕ್ಕೆ ಕಾಲೇಜು ವಿದ್ಯಾರ್ಥಿಗೆ ಹಲ್ಲೆ ➤  ಆರೋಪಿಗಳ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಜ.14. ಬಸ್ಸಿನಲ್ಲಿ ವಿದ್ಯಾರ್ಥಿನಿ ಜತೆ ಮಾತನಾಡಿದ್ದಾರೆಂದು ತಂಡವೊಂದು ವಿದ್ಯಾರ್ಥಿಗೆ ಹಲ್ಲೆ ನಡೆಸಿರುವ ಕುರಿತು ವಿಟ್ಲದಲ್ಲಿ ವರದಿಯಾಗಿದೆ. ಮಂಗಳಪದವು ನಿವಾಸಿ ಅಬ್ಬಾಸ್ ಎಂಬವರ ಪುತ್ರ ಮಹಮ್ಮದ್‌ ಶಾಕೀರ್‌ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ವಿಟ್ಲ ಠಾಣೆಗೆ ದೂರು ನೀಡಿದ್ದಾನೆ ಎನ್ನಲಾಗಿದೆ.

ಈ ಕುರಿತು ಕೆಲಿಂಜ ನಿವಾಸಿಗಳಾದ ಚಂದ್ರಶೇಖರ, ಪ್ರಜ್ವಲ್‌, ರೋಹಿತ್‌ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಂಗಳೂರು ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿರುವ ಶಾಕೀರ್‌ ಕಾಲೇಜಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಮನೆಗೆ ಬರುತ್ತಿದ್ದಾಗ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವಿದ್ಯಾರ್ಥಿನಿಗೆ ಚಾಕಲೇಟು ತೋರಿಸಿದ್ದಾನೆಂದು ಆರೋಪಿಸಿ ಕೆಲಿಂಜ ಎಂಬಲ್ಲಿಗೆ ಬಸ್ ತಲುಪಿದಾಗ ಬಸ್ಸಿಗೆ ಏಕಾಏಕಿಯಾಗಿ ನಿವಾಸಿಗಳಾದ ಚಂದ್ರಶೇಖರ, ಪ್ರಜ್ವಲ್‌, ರೋಹಿತ್‌ ಹಾಗೂ ಇತರ 3 ಮೂವರು ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ವರದಿ ತಿಳಿಸಿದೆ.

Also Read  ಉಪ್ಪಿನಂಗಡಿ: ಕುದುರೆಗೆ ಬಸ್ ಢಿಕ್ಕಿ ➤ ಕುದುರೆ ಹಾಗೂ ಸವಾರ ಗಂಭೀರ

Vitala

 

 

error: Content is protected !!
Scroll to Top