Meesho ಆ್ಯಪ್ ನಲ್ಲಿ ಒಂದು ಟೀ ಶರ್ಟ್ ಬುಕ್ ಮಾಡಿ 10 ಲಕ್ಷ ಕಳೆದುಕೊಂಡ ಮಹಿಳೆ..!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.13. Meesho ಆ್ಯಪ್ ನಲ್ಲಿ ಒಂದು ಟೀ ಶರ್ಟ್ ಬುಕ್ ಮಾಡಿದ್ದ ಮಹಿಳೆಯೊಬ್ಬರು 10 ಲಕ್ಷ ರೂ ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಲಾಟರಿ ಹೆಸರಲ್ಲಿ ಮಹಿಳೆಗೆ ಖದೀಮರು ಲಕ್ಷ-ಲಕ್ಷ ಪಂಗನಾಮ ಹಾಕಿದ್ದಾರೆ. ಅರುಣ ಎಂಬ ಮಹಿಳೆಗೆ ವಂಚಿಸಿರುವ ಆನ್ಲೈನ್ ಖದೀಮರು ಲಾಟರಿಯಲ್ಲಿ ಕಾರು ಬಂದಿದೆ ಎಂದು ಪತ್ರ ಕಳುಹಿದ್ದರು. ಟೀ ಶರ್ಟ್ ಜೊತೆ ವಂಚಕರು  ಪೋಸ್ಟ್ ಕಾರ್ಡ್, ಸ್ಕ್ರಾಚ್ ಕಾರ್ಡ್, ಲೇಟರ್  ಕಳುಹಿಸಿದ್ದರು. ಲೇಟರ್ ನಲ್ಲಿ ಲಾಟರಿ ಮೂಲಕ ಕಾರು ಬಹುಮಾನ ಬಂದಿದೆ ಎಂದು ವಂಚಕರು ಬಿಂಬಿಸಿದ್ದರು. ಅಚ್ಚ ಕನ್ನಡದಲ್ಲಿ ಮಾತನಾಡಿ ಮಹಿಳೆಗೆ  ಸೈಬರ್ ಚೋರರು ಯಾಮಾರಿಸಿದ್ದರು.

Also Read  ರಸ್ತೆ ದಾಟುತ್ತಿದ್ದ ವೇಳೆ ಬೈಕ್‌ ಡಿಕ್ಕಿ ➤ ಪಾದಚಾರಿ ಸ್ಥಳದಲ್ಲೇ ಮೃತ್ಯು

ಇದನ್ನು ನಂಬಿದ ಮಹಿಳೆ ಅರುಣಾ ಪತ್ರದಲ್ಲಿದ್ದ ಸಂಖ್ಯೆಗೆ ವಾಟ್ಸ್ ಆ್ಯಪ್ ನಲ್ಲಿ ಮೆಸೇಜ್ ಮಾಡಿದ್ದರು. ಆ ಕಡೆಯಿಂದ ಕಾರು, ಬೇಕೋ ಹಣ ಬೇಕೋ ಎಂದು ವಂಚಕರು ಕೇಳಿದ್ದರು. ಆರ್ಥಿಕ ಸಮಸ್ಯೆ ಇರುವ ಕಾರಣ ಕಾರಿನ ಬದಲು ಹಣ ನೀಡಿ  ಎಂದು ಅರುಣ ಉತ್ತರಿಸಿದ್ದರು ಎನ್ನಲಾಗಿದೆ.

 

error: Content is protected !!
Scroll to Top