ರಾಜ್ಯದ ರೈಲ್ವೆ ಪೊಲೀಸರಿಗೆ ಬಂತು ಶೋಲ್ಡರ್ ಲೈಟ್ !

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.13. ರಾಜ್ಯದಲ್ಲಿ ಪ್ರಥಮ ಬಾರಿಗೆ ರೈಲ್ವೆ ಪೊಲೀಸರಿಗೆ ‘ಶೋಲ್ಡರ್ ಲೈಟ್’ಗಳನ್ನು ವಿತರಿಸಲಾಗಿದ್ದು, ಇನ್ನು ಮುಂದೆ ರಾತ್ರಿ ವೇಳೆ ರೈಲು ಗಸ್ತು, ರೈಲು ಹಳಿ ಗಸ್ತು ಹಾಗೂ ಅಪರಾಧಗಳ ಘಟನಾ ಸ್ಥಳಗಳಲ್ಲಿ ರೈಲ್ವೆ ಪೊಲೀಸರ ಇರುವಿಕೆ ಗುರುತಿಸಲು ಇದರಿಂದ ಸಹಾಯಕವಾಗಲಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಎಸ್‌.ಕೆ ಸೌಮ್ಯಲತಾ ಅವರು, ರೈಲ್ವೇ ಪೊಲೀಸರಿಗೆ ಶೋಲ್ಡರ್ ಲೈಟ್ ವಿತರಿಸಲಾಗಿದ್ದು, ಇದರಿಂದ ರೈಲ್ವೇ ನಿಲ್ದಾಣಗಳ ಮತ್ತು ಪ್ಲಾಟ್ ಫಾರ್ಮ್’ಗಳಲ್ಲಿ ಸ್ಪಷ್ಟ ಗೋಚರೆಯನ್ನು ಖಚಿತಪಡಿಸುತ್ತದೆ. 190 ಶೋಲ್ಡರ್ ದೀಪಗಳನ್ನು ಪೊಲೀಸರಿಗೆ ವಿತರಿಸಲಾಗಿದ್ದು, ರಾತ್ರಿ ವೇಳೆ ಗಸ್ತು ತಿರುಗುವ ಪೊಲೀಸರು ಇದನ್ನು ಬಳಕೆ ಮಾಡುತ್ತಾರೆಂದು ಹೇಳಿದ್ದಾರೆ.

Also Read  ನಾಳೆ (ಜ. 30) ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಉದ್ಘಾಟನೆ..!

 

 

error: Content is protected !!
Scroll to Top