(ನ್ಯೂಸ್ ಕಡಬ) newskadaba.com ಕಾರವಾರ, ಜ.13. ಕೈಗಾ ಟೌನ್‌ಶಿಪ್‌ನಲ್ಲಿ ಗಾಯಗೊಂಡು ಕೆಳಗೆ ಬಿದ್ದಿದ್ದ ಅಪರೂಪದ ಹಾರುವ ಅಳಿಲನ್ನು ಕಾರವಾರ ತಾಲೂಕಿನ ಕದ್ರಾ ಅರಣ್ಯ ವಲಯದ ವಿರ್ಜೆ ಬೀಟ್‌ನ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅವರು ರಕ್ಷಣೆ ಮಾಡಿದ್ದಾರೆ. ಮರದಿಂದ ಮರಕ್ಕೆ ಹಾರುವ ವೇಳೆ ಅಳಿಲು ಆಕಸ್ಮಿಕವಾಗಿ ರೆಂಬೆಗಳಿಗೆ ತಾಗಿ ಗಾಯಗೊಂಡು ಮಲ್ಲಾಪುರ ಟೌನ್‌ಶಿಪ್‌ನ ಎನ್‌ಪಿಸಿಐಎಲ್ ಸಿಬ್ಬಂದಿಯೋರ್ವರ ಮನೆಯ ಮೇಲೆ ಬಿದ್ದಿತ್ತು. ಈ ಬಗ್ಗೆ ಸ್ಥಳೀಯರು ಅರಣ್ಯ ರಕ್ಷಕ ನಾಗರಾಜ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ನಾಗರಾಜ್ ಅವರು ಬಿಲಾಲ್ ಅವರಿಗೆ ಮಾಹಿತಿ ನೀಡಿದ್ದು, ಕೂಡಲೇ ಬಿಲಾಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಅಳಿಲಿಗೆ ಅಗತ್ಯ ಚಿಕಿತ್ಸೆ ನೀಡಿ, ಪುನಃ ಕಾಡಿಗೆ ಬಿಟ್ಟಿದ್ದಾರೆ. ಅಳಿಲು ತೀವ್ರವಾಗಿ ಗಾಯಗೊಂಡು, ಪ್ರಜ್ಞಾಹೀನ ಸ್ಥಿತಿಗೆ ತಲುಪಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅಳಿಲು ನಿತ್ರಾಣಗೊಂಡಿತ್ತು. ಸುತ್ತಲೂ ಜನರು ನಿಂತಿರುವುದನ್ನು ನೋಡಿ ಆತಂಕಕ್ಕೊಳಗಾಗಿತ್ತು. ಹ್ಯಾಂಡ್ ಗ್ಲೌಸ್ ಧರಿಸಿ ಅಳಿಲಿಗೆ ಚಿಕಿತ್ಸೆ ನೀಡುವ ಕೆಲಸ ಮಾಡಿದೆ. ಗಾಯಗೊಂಡಿದ್ದ ಜಾಗದಲ್ಲಿ ಇರುವೆಗಳು ಮುತ್ತಿಕೊಂಡು ಮತ್ತಷ್ಟು ಗಾಯಗೊಳ್ಳುವಂತೆ ಮಾಡಿತ್ತು. ಇದರಿಂದ ಸೋಂಕು ಕೂಡ ಕಂಡು ಬಂದಿತ್ತು. ಬಳಿಕ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ.