ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿಚಾರದಲ್ಲಿ ಸರಕಾರದಿಂದ ತಾರತಮ್ಯ ➤  ಮಾನವಹಕ್ಕುಗಳ ಕಣ್ಗಾವಲು ಸಂಸ್ಥೆ ಕಳವಳ !                                   

(ನ್ಯೂಸ್ ಕಡಬ) newskadaba.com  ನವದೆಹಲಿ, ಜ.13. ಸರ್ಕಾರವು ಮುಸ್ಲಿಮರನ್ನು ಸೇರಿ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ನೀತಿಗಳನ್ನು ಬಳಸಿದೆ ಎಂದು ಮಾನವಹಕ್ಕುಗಳ ಕಣ್ಗಾವಲು ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ. ಕೆಲವು ಸಮೂಹಗಳ ಮೇಲೆ ಗುರಿಯಿರಿಸಿ ದಾಳಿ ನಡೆಸುವ ಘಟನೆಗಳು ಹೆಚ್ಚುತ್ತಿವೆ ಎಂದು ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆ ತನ್ನ ‘ 2022 ಜಾಗತಿ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.

ಮುಸ್ಲಿಂ ಸಮುದಾಯದವರ ಕಟ್ಟಡಗಳ ನೆಲಸಮ, ಮುಹಮ್ಮದ್ ಝುಬೈರ್ ಹಾಗೂ ಪತ್ರಕರ್ತ ಸಿದ್ದೀಕಿ ಕಪ್ಪನ್ ಬಂಧನಗಳು, ಜಮ್ಮುಕಾಶ್ಮೀರದಲ್ಲಿ ಭದ್ರತಾಪಡೆಗಳು ನಡೆಸಿದ ಯೋಜಿತ ಹತ್ಯೆಗಳು ಹಾಗೂ ಸರಕಾರೇತರ ಸಂಘಟನೆಗಳ ಮೇಲೆ ತೆರಿಗೆ ಅಧಿಕಾರಿಗಳ ದಾಳಿಯನ್ನು ಕೂಡಾ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

Also Read  ಭಾರತ್ ಪೇ ಸಿಇಒ ಸುಹೇಲ್ ಸಮೀರ್ ಹುದ್ದೆಗೆ ರಾಜಿನಾಮೆ…!!!         

ತೆರಿಗೆ ದಾಳಿಗಳು, ಹಣಕಾಸಿನ ಅಕ್ರಮಗಳ ಆರೋಪಗಳು ಮತ್ತು ಸರ್ಕಾರೇತರ ಸಂಸ್ಥೆಗಳ ವಿದೇಶಿ ನಿಧಿಯನ್ನು ನಿಯಂತ್ರಿಸುವ ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆಯ ಬಳಕೆಯ ಮೂಲಕ ಕಿರುಕುಳ ನೀಡಿರುವುದನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

 

error: Content is protected !!
Scroll to Top