ಆಲಂಕಾರು: ರಿಕ್ಷಾ ಮತ್ತು ಬೈಕ್  ನಡುವೆ ಅಪಘಾತ ! ➤  ಚಾಲಕ ಸಹಿತ ಇಬ್ಬರಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com  ಆಲಂಕಾರು, ಜ.13. ಬೈಕ್ ಹಾಗೂ ಆಟೋ ರಿಕ್ಷಾವೊಂದರ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಆಟೋ ರಿಕ್ಷಾ ಚರಂಡಿಗೆ ಬಿದ್ದು, ರಿಕ್ಷಾ ಚಾಲಕ ಹಾಗೂ ಪ್ರಯಾಣಿಕರೋರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ರಾಮಕುಂಜದಲ್ಲಿ ವರದಿಯಾಗಿದೆ.

ರಿಕ್ಷಾ ಚಾಲಕ ಕೊಯಿಲ ಗ್ರಾಮದ ಪಿಲಿಕುಡೇಲು ನಿವಾಸಿ ಅಬ್ದುಲ್ ಸತ್ತಾರ್ ಪಿ. ಹಾಗೂ ಪ್ರಯಾಣಿಕ ರಾಮಕುಂಜ ನಿವಾಸಿ ಕೂಸಪ್ಪ ಎಂಬವರು ಗಾಯಗೊಂಡವರು ಎಂದು ಗುರುತಿಸಲಾಗಿದೆ. ಅಬ್ದುಲ್ ಸತ್ತಾರ್‌ರವರು ತನ್ನ ಆಟೋ ರಿಕ್ಷಾ (KA-21 B-9479)ದಲ್ಲಿ ಆತೂರು ಜಂಕ್ಷನ್‌ನಿಂದ ರಾಮಕುಂಜ ನಿವಾಸಿ ಕೂಸಪ್ಪ ಎಂಬವರನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ರಾಮಕುಂಜ ಗ್ರಾಮದ ಅಂಬೇಡ್ಕರ್ ನಗರದ ಕಾಂಕ್ರೀಟ್ ರಸ್ತೆಯಲ್ಲಿ ಹೋಗುತ್ತಿರುವಾಗ ಎದುರಿನಿಂದ ವಿಜಯ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

Also Read  ಮಂಗಳೂರು ವೈದ್ಯರು, ಪೊಲೀಸರು ಸೇರಿ 44 ಮಂದಿಗೆ ಕೊರೊನಾ ಪಾಸಿಟಿವ್

ಡಿಕ್ಕಿಯಿಂದಾಗಿ ಆಟೋ ರಿಕ್ಷಾ ರಸ್ತೆಯ ಎಡ ಬದಿಯ ಚರಂಡಿಗೆ ಬಿದ್ದ ಪರಿಣಾಮ ರಿಕ್ಷಾ ಚಾಲಕ ಹಾಗೂ ಪ್ರಯಾಣಿಕ ಗಾಯಗೊಂಡಿದ್ದು, ಇವರನ್ನು ಬೈಕ್ ಸವಾರ ಹಾಗೂ ಸ್ಥಳದಲ್ಲಿದ್ದ ಸಾರ್ವಜನಿಕರು ಉಪಚರಿಸಿ ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆ ತಂದು ದಾಖಲಿಸಿರುವುದಾಗಿ ವರದಿಯಾಗಿದೆ.

 

error: Content is protected !!
Scroll to Top