ಹುಬ್ಬಳ್ಳಿ ಮೋದಿ ಕಾರ್ಯಕ್ರಮದಲ್ಲಿ ಕುಸಿದು ಬಿದ್ದ ಯುವತಿ ➤ ಆಸ್ಪತ್ರೆಗೆ ದಾಖಲು

ನ್ಯೂಸ್ ಕಡಬ) newskadaba.com, ಹುಬ್ಬಳ್ಳಿ, ಜ. 13.  ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನಾ ಸಮಾರಂಭದ ವೇಳೆ ನಾಡಗೀತೆ ಹೇಳುತ್ತಿದ್ದ ಯುವತಿಯೊಬ್ಬಳು ಕುಸಿದುಬಿದ್ದ ಘಟನೆ ನಡೆದಿದೆ.

ವೇದಿಕೆಯ ಪಕ್ಕದಲ್ಲಿ ನಾಡಗೀತೆ, ಮಲ್ಲಕಂಬ ಹಾಗೂ ಯೋಗಾಸನ ಪ್ರದರ್ಶನಕ್ಕೆ ಪ್ರತ್ಯೇಕ ವೇದಿಕೆ ಹಾಕಲಾಗಿತ್ತು. ನಾಡಗೀತೆಯನ್ನು ಇಲ್ಲಿನ ಮೂರು ಸಾವಿರ ಮಠ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಹಾಡುತ್ತಿದ್ದರು. ಅದಕ್ಕಿಂತ ಮುನ್ನ ಸುಗಮ ಸಂಗೀತ, ಭಾವಗೀತೆ, ಜಾನಪದ ಹೀಗೆ ಸಾಲುಸಾಲು ಐದು ಹಾಡುಗಳನ್ನು ಹಾಡಿದ್ದ ವಿದ್ಯಾರ್ಥಿನಿಯರು ನಾಡಗೀತೆ ಹಾಡುತ್ತಿದ್ದ ವೇಳೆ ಮಧ್ಯದಲ್ಲಿ ವಿದ್ಯಾರ್ಥಿನಿ ಕುಸಿದು ಬಿದ್ದಳು.

Also Read  ಎಸಿಬಿ ಬಲೆಗೆ ಬಿದ್ದ ಪುತ್ತೂರು ತಹಶೀಲ್ದಾರ್

ಕೂಡಲೇ ಆಕೆಯನ್ನು ವೈದ್ಯರ ಬಳಿ ಕರೆದೊಯ್ಯಲಾಯಿತು. ಇದೇ ವೇಳೆ ಒಂದೇ ಕಾಲೇಜಿಗೆ ಇಷ್ಟು ಹಾಡುಗಳನ್ನು ಹಾಡಲು ಅವಕಾಶ ನೀಡುವ ಮೂಲಕ ಸಂಘಟಕರು ಉಳಿದ ಕಾಲೇಜಿನ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಿದ್ದಾರೆ ಎನ್ನುವ ಮಾತುಗಳೂ ಕೇಳಿಬಂದವು.

error: Content is protected !!
Scroll to Top